ಕಲಬುರಗಿ | ಸಾವಿತ್ರಿಬಾಯಿ ಫುಲೆ ಹೆಸರಲ್ಲಿ ಪ್ರತ್ಯೇಕ ಪ್ರಶಸ್ತಿ ಘೋಷಿಸಿ : ಸುರೇಶ ಬಡಿಗೇರ
ಕಲಬುರಗಿ : ತನ್ನ ಇಡೀ ಜೀವನವನ್ನೇ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಮೀಸಲಾಗಿಟ್ಟ ಮಹಾನ ಶಿಕ್ಷಕಿ ಮಾತೆ ಸಾವಿತ್ರಿಬಾಯಿ ಫುಲೆ ಹೆಸರಲ್ಲಿ ರಾಜ್ಯ ಸರ್ಕಾರವು ಪ್ರತ್ಯೇಕ ಪ್ರಶಸ್ತಿಯನ್ನು ಘೋಷಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಸುರೇಶ ಬಡಿಗೇರ ಆಗ್ರಹಿಸಿದರು.
ನಗರದ ಸರಕಾರಿ ಕನ್ಯಾ ಪ್ರೌಢ ಶಾಲೆಯಲ್ಲಿ, ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ ಏರ್ಪಡಿಸಿದ ಮಾತೆ ಸಾವಿತ್ರಿಬಾಯಿ ಯವರ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಮುಂದುವರೆದು ಮಾತನಾಡಿದ ಅವರು, ಜಾತಿ ವ್ಯವಸ್ಥೆ ಮತ್ತು ಮೌಢ್ಯತೆ ವಿರುದ್ಧ ಸಂಘರ್ಷ ಮಾಡಿದ ಮಾತೆ ಸಾವಿತ್ರಿಬಾಯಿ ಫುಲೆ ಅವರು, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಹೊತ್ತು ಕೊಟ್ಟಿದ್ದಾರೆ ಎಂದು ಹೇಳಿದರು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯಕುಮಾರ ಜಮಖಂಡಿ ಅವರು, ಸಾವಿತ್ರಿಬಾಯಿ ಅವರ ಕಾರ್ಯಸಾಧನೆಯನ್ನು ನೋಡಿ ಬ್ರಿಟಿಷರು ಅವರನ್ನು ಕೊಂಡಾಡಿದರು ಎಂದರು.
ಕಾರ್ಯಕ್ರಮದ ಆರಂಭಕ್ಕೆ ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ನಂದಿನಿ ಸನ್ಬಾಲ, ಸಾವಿತ್ರಿಬಾಯಿ ಅವರ ಎಲ್ಲಾ ಕೆಲಸದ ಹಿಂದೆ ಅವರ ಪತಿ ಜ್ಯೋತಿಬಾ ಫುಲೆ ಅವರ ಅವಿಸ್ಮರಣೀಯ ಸೇವೆ ಯಾವತ್ತೂ ಮರೆಯಬಾರದು ಎಂದು ಹೇಳಿದರು.
ಕಾರ್ಯಕ್ರಮದ ವೇದಿಕೆಯ ಮೇಲೆ ಸರಕಾರಿ ಕನ್ಯಾ ಪ್ರೌಢಶಾಲೆಯ ಉಪ ಪ್ರಾಚಾರ್ಯ ವಿಜಯಕುಮಾರ ವಿ. ಬೆಳಮಗಿ, ನ್ಯಾಯವಾದಿ ಡಾ.ಸುನಿಲ ಕುಮಾರ ಒಂಟಿ, ಸಮಾಜ ಸೇವಕಿ ಮಾಲಾ ಕಣ್ಣಿ, ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕಿ ಡಾ.ಗೀತಾ ಪಾಟೀಲ, ಡಾ.ರವಿಕಾಂತಿ ಕ್ಯಾತನಾಳ, ಸುಮಂಗಲ ಜಿ ಸಂಗಾವಿ, ಸವಿತಾ ಬಿ. ನಾಸಿ ರೇಣುಕಾ ಡಾಂಗೆ ಶೇಶಿಕಲಾ ನರೋಣಾಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.