ಕಲಬುರಗಿ | ಆಳಂದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಧರ್ಮಣ್ಣಾ ಧನ್ನಿ ಅವರಿಗೆ ಅಧಿಕೃತ ಆಹ್ವಾನ

Update: 2025-01-05 11:52 GMT

ಕಲಬುರಗಿ : ಆಳಂದ ತಾಲೂಕು 12ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಹಿತಿ ಧರ್ಮಣ್ಣಾ ಧನ್ನಿ ಅವರನ್ನು ಆಳಂದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ತಂಡವು ಸಮ್ಮೇಳನಕ್ಕೆ ಅಧಿಕೃತ ಆಹ್ವಾನ ನೀಡಿತು.

ಕಲಬುರಗಿಯ ಕನ್ನಡ ಭವನಕ್ಕೆ ಭೇಟಿ ನೀಡಿದ ಪದಾಧಿಕಾರಿಗಳು ಸಾಂಪ್ರದಾಯಿಕವಾಗಿ ಫಲ ತಾಂಬೂಲ ನೀಡಿ, ಶಾಲು ಹೊದಿಸಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಪ್ರಸ್ತುತ ಕನ್ನಡಕ್ಕೆ ಸಂಕಷ್ಟದ ದಿನಗಳು ಎದುರಾಗಿದೆ. ಮಾತೃಭಾಷೆಯಲ್ಲಿ ಶಿಕ್ಷಣ ನೀಡಬೇಕೆನ್ನುವ ನಿಲುವಿಗೆ ಎಲ್ಲರು ಬದ್ಧರಾಗಬೇಕಿದೆ ಎಂದರು.

ಹಿರಿಯ ಉಪನ್ಯಾಸಕ ರಮೇಶ ಮಾಡ್ಯಾಳಕರ್ ಮಾತನಾಡಿ, ಜಗತ್ತಿನ ಅತ್ಯಂತ ಶ್ರೀಮಂತ ಭಾಷೆ ಕನ್ನಡ, ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ, ಪ್ರತಿಯೊಬ್ಬರ ಅಂತರಂಗದ ಭಾಷೆಯಾಗಿದೆ, ಕನ್ನಡ ಭಾಷೆ ಉಳಿಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನಿರಂತರ ಸಮ್ಮೇಳನಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.

ಆಳಂದ ಕಸಾಪ ಮಾಜಿ ಅಧ್ಯಕ್ಷ ಡಾ.ಅಪ್ಪಾಸಾಬ ಬಿರಾದಾರ ಮಾತನಾಡಿ, ಸಮ್ಮೇಳನದ ತಯಾರಿ ಭರದಿಂದೆ ಸಾಗಿದೆ. ಸರ್ವ ಪದಾಧಿಕಾರಿಗಳು ಸಮ್ಮೇಳನ ಯಶಸ್ಸಿಗೆ ಟೊಂಕ ಕಟ್ಟಿ ನಿಂತಿದ್ದಾರೆ. ಈ ಬಾರಿ ಸಮ್ಮೇಳನ ವಿಶೇಷವಾಗಿ ಗಡಿನಾಡ ಗ್ರಾಮದಲ್ಲಿ ಹಮ್ಮಿಕೊಂಡಿರುವುದು ಸರ್ವ ಕನ್ನಡ ಪ್ರಿಯರ ಸಂತಸಕ್ಕೆ ಕಾರಣವಾಗಿದೆ ಎಂದರು.

ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಆರ್.ಕೆ.ಹುಡಗಿ, ಹಿರಿಯ ಮುಖಂಡ ಶ್ಯಾಮರಾವ ಸೂರನ್, ಆಳಂದ ಕಸಾಪ ಅಧ್ಯಕ್ಷ ಹಣಮಂತ ಶೇರಿ, ಕಸಾಪ ಪದಾಧಿಕಾರಿಗಳಾದ ಶಿವರಾಜ ಅಂಡಗಿ, ಶರಣರಾಜ ಛಪ್ಪರಬಂದಿ, ವಿನೋದ ಜನೇವರಿ, ಸಿದ್ಧಲಿಂಗ ಬಾಳಿ, ರವಿ ಶಾಪುರಕರ, ಎಸ್ ಕೆ ಬಿರಾದಾರ, ಕಲ್ಯಾಣಿ ಸಾವಳಗಿ, ವಿಶ್ವನಾಥ ಘೋಡಕೆ, ಅಂಬಾರಾಯ ಕಾಂಬಳೆ, ರಾಜಕುಮಾರ ಹರಳಯ್ಯ, ಪ್ರದೀಪ ಜಿಡ್ಡೆ, ಶರಣಬಸಪ್ಪ ವಡಗಾಂವ, ಸಂತೋಷ ಕುಂಬಾರ, ಸುಧಾಕರ ಖಾಂಡೇಕರ್, ಮಹಾದೇವ ವಡಗಾಂವ, ಮಲ್ಲಿನಾಥ ತುಕ್ಕಾಣೆ, ಮಲ್ಲಿಕಾರ್ಜುನ ಬುಕ್ಕೆ, ಗೋವಿಂದ ಹುಸೇನ್ಖಾನ್, ರೂಪಚಂದ ಮಂಡ್ಲೆ, ಮಲ್ಲಿಕಾರ್ಜುನ ವಣದೆ, ರಾಜಶೇಖರ ಕಡಗನ ಸೇರಿದಂತೆ ಇತರರು ಇದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News