ಕಲಬುರಗಿ | ಪತ್ರಿಕಾರಂಗಕ್ಕೆ ಅಫಜಲ್ ಪುರ ತಾಲ್ಲೂಕಿನ ಕೊಡುಗೆ ಅಪಾರ : ಶಾಸಕ ಎಂ.ವೈ.ಪಾಟೀಲ್

Update: 2025-01-05 14:48 GMT

ಕಲಬುರಗಿ : ಪತ್ರಿಕಾ ಮತ್ತು ಸಾಹಿತ್ಯ ರಂಗದಲ್ಲಿ ನಮ್ಮ ಅಫಜಲ್ ಪುರ ತಾಲ್ಲೂಕಿನ ಕೊಡುಗೆ ಅಪಾರವಾಗಿದೆ ಎಂದು ಅಫಜಲ್ ಪುರ ಶಾಸಕ ಎಂ.ವೈ.ಪಾಟೀಲ್ ಹೇಳಿದರು.

ಅಫಜಲ್ ಪುರ ಪಟ್ಟಣದ ಶ್ರೀ ಸಿದ್ದರಾಮೇಶ್ವರ ಕಲ್ಯಾಣ ಮಂಟಪದಲ್ಲಿ ಅಫಜಲ್ ಪುರದ ನಾಗರಿಕ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪತ್ರಿಕಾರಂಗದಲ್ಲಿ ದೇವಯ್ಯ ಗುತ್ತೇದಾರ್, ಡಿ.ಶಿವಲಿಂಗಪ್ಪ ದೊಡ್ಮನಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಡಾ.ಹನುಮಂತರಾವ ದೊಡ್ಮನಿ ಅವರು ತಮ್ಮ ಕ್ಷೇತ್ರಗಳಲ್ಲಿ ಸಾಧನೆ ಮಾಡಿ, ಮುಂಬರುವ ಯುವ ಬರಹಗಾರರಿಗೆ ಮಾದರಿಯಾಗಿದ್ದಾರೆ. ಇಂತಹ ಸಾಧಕರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಂಡಿದ್ದು ಸಂತಸ ತಂದಿದೆ ಎಂದರು.

ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಮಾತನಾಡಿ, ಯಾರ್ಯಾರು ಸಚಿವರಾಗಿದ್ದಾರೆ, ಆದರೆ ಹಿರಿಯರಾಗಿರುವ ಎಂ.ವೈ.ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಲೆಂದು ಹಲವಾರು ಬಾರಿ ಆಗ್ರಹಿಸಿದ್ದೇನೆ. ಅದೇ ರೀತಿ ನಮ್ಮ ಭಾಗದ ಸಾಧಕರಿಗೆ ಅವಕಾಶ ಸಿಗದಿದ್ದಾಗ ಪ್ರತ್ಯೇಕ ಕಲ್ಯಾಣ ಕರ್ನಾಟಕ ರಾಜ್ಯ ಘೋಷಣೆ ಮಾಡಿ ಎಂದು ಬಹಿರಂಗವಾಗಿ ಹೇಳಿರುವ ಪ್ರತಿಫಲವಾಗಿ ಇವತ್ತು ಈ ಭಾಗದ ಹಲವಾರು ಸಾಧಕರಿಗೆ ಸರ್ಕಾರ ಗೌರವಿಸುತ್ತಿದೆ. ಲೇಖನಗಳು ಮೂಲಕ ಜಲಂತ ಸಮಸ್ಯೆಗಳನ್ನು ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸಾಧಕರು ಕೆಲಸ ಮಾಡಿದ್ದಾರೆ. ದೃಶ್ಯ ಮಾಧ್ಯಮಕ್ಕಿಂತ ಮುದ್ರಣ ಮಾಧ್ಯಮ ಸಾಕಷ್ಟು ಮೌಲ್ಯಗಳನ್ನು ಉಳಿಸಿಕೊಂಡು ಮುಂದೆ ಹೋಗುತ್ತಿದೆ ಎಂದರು.

ಸಮಾರಂಭದ ಸಾನಿಧ್ಯವನ್ನು ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರ, ಶ್ರೀ ಚನ್ನಮಲ್ಲ ಶಿವಾಚಾರ್ಯರು ವಹಿಸಿದ್ದರು. ಈ ಸಂದರ್ಭದಲ್ಲಿ ಪೋಲಿಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ., ಕೆಪಿಸಿಸಿ ಸದಸ್ಯ ಜೆ.ಎಂ.ಕೊರಬು, ಅವ್ವಣ್ಣ ಮ್ಯಾಕೇರಿ, ಪ್ರಕಾಶ್ ಜಮಾದಾರ, ಸಿದ್ದಾರ್ಥ್ ಬಸರಗಿಡ, ರಮೇಶ್ ಪೂಜಾರಿ,ಚಂದ್ರಶೇಖರ ಕರಜಗಿ, ಶಿವಪುತ್ರಪ್ಪ ಸಂಗೋಳಗಿ, ಭೀಮರಾವ್ ಗೌರ, ಮಹಾಂತೇಶ ಬಳೂಂಡಗಿ, ಮಹಾಲಿಂಗ ಅಂಗಡಿ, ರವಿ ಗೌರ, ಮಹಾಂತೇಶ ಬಡದಾಳ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.

ತಾಲ್ಲೂಕು ಸಾಧಕರಿಗೆ ಸನ್ಮಾನ :

ಮೋಹರೆ ಹಮಮಂತರಾಯ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಸಂಧ್ಯಾಕಾಲ ಸಂಪಾದಕರಾದ ಶಿವಲಿಂಗಪ್ಪ ದೊಡ್ಮನಿ, 2024ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಹಣಮಂತರಾವ್ ದೊಡ್ಮನಿ, ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕೃತ ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕ ದೇವಯ್ಯ ಗುತ್ತೇದಾರ್ ಹಾಗೂ ಧಮ್ಮ ಅಧ್ಯಯನಕ್ಕಾಗಿ ಶ್ರೀಲಂಕಾ ಪ್ರವಾಸ ಕೈಗೊಂಡು ಉಪನ್ಯಾಸಕರಾದ ಡಾ.ಶಾಂತಮಲ್ಲಪ್ಪ ಹೊನ್ನುಂಗರ, ದತ್ತಪ್ಪ ದೊಡ್ಮನಿ, ದಾನಪ್ಪ ದೊಡ್ಮನಿ ಅವರಿಗೆ ಅಭಿನಂದಿಸಿ, ಗೌರವಿಸಲಾಯಿತು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News