ಕಲಬುರಗಿ ನಗರಾಭಿವೃದ್ಧಿಗೆ 668 ಕೋಟಿ ರೂ. ಅನುದಾನ ನೀಡುವಂತೆ ಶಾಸಕ ಅಲ್ಲಮಪ್ರಭು ಪಾಟೀಲ್‌ ಒತ್ತಾಯ

Update: 2025-01-03 16:30 GMT

ಕಲಬುರಗಿ : ಕಲಬುರಗಿ ನಗರದಲ್ಲಿ 24 ಗಂಟೆ ಕುಡಿಯುವ ನೀರಿನ ಯೋಜನೆ ಪೂರ್ಣಗೊಳಿಸಲು, ಒಳಚರಂಡಿ ಸಂಪರ್ಕ ಕಲ್ಪಿಸಲು, ಸಿ.ಸಿ. ರಸ್ತೆ, ಉದ್ಯಾವನ ನಿರ್ಮಾಣಕ್ಕೆ ಒಟ್ಟಾರೆ 668 ಕೋಟಿ ರೂ. ನೀಡುವಂತೆ ಕಲಬುರಗಿ ದಕ್ಷಿಣ ಸಾಸಕ ಅಲ್ಲಮಪ್ರಭು ಪಾಟೀಲ್‌ ಒತ್ತಾಯ ಮಾಡಿದ್ದಾರೆ.

ಶುಕ್ರವಾರ ಕಲಬುರಗಿ ನಗರದಲ್ಲಿ ನಗರಾಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಲು ಆಗಮಿಸಿದ್ದ ರಾಜ್ಯದ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್‌ ಅವರಿಗೆ ಈ ಕುರಿತು ಮನವಿ ಪತ್ರ ಸಲ್ಲಿಸಿರುವ ಅವರು, ವಿಶೇಷ ಅನುದಾನದ ಪ್ಯಾಕೇಜ್ ಬರುವ ಆಯವ್ಯಯದಲ್ಲಿ ಘೋಷಿಸಿಬೇಕೆಂದು ಅವರು ಕೋರಿದ್ದಾರೆ.

ಕಲಬುರಗಿ ನಗರದಲ್ಲಿ ನಿರಂತರ ಕುಡಿಯುವ ನೀರಿನ ಯೋಜನೆ 47ರಲ್ಲಿ 32 ವಲಯಕ್ಕೆ ಸೀಮಿತವಾಗಿದ್ದು, ಬಾಕಿ 15 ವಲಯದ 29,522 ಗೃಹ ನಳ ಸಂಪರ್ಕ ಜಾಲ ವಿಸ್ತರಣೆ ಸೇರಿದಂತೆ ಇತರೆ ಕಾಮಗಾರಿಗಳಿಗೆ 385 ಕೋಟಿ ರೂ., 320 ಕಿ.ಮೀ. ರಸ್ತೆ ನಿರ್ಮಾಣಕ್ಕೆ 160 ಕೋಟಿ ರೂ., ಬಾಕಿ ಇರುವ 280 ಉದ್ಯಾನವನಗಳ ಪೈಕಿ ಮೊದಲನೆ ಹಂತದಲ್ಲಿ 125 ಉದ್ಯಾನವನಗಳ ಅಭಿವೃದ್ಧಿಗೆ 100 ಕೋಟಿ ರೂ., ಸರಡಗಿ ಇನ್‌ಟೇಕ್ ವೆಲ್ ಹತ್ತಿರದ ಬ್ಯಾರೇಜಿಗೆ ಚರಂಡಿ ನೀರು ಸೇರಿದಂತೆ ನಾಲಾ ಡೈವರ್ಸನ್ ಕಾಮಗಾರಿಗೆ 10 ಕೋಟಿ ರೂ. ನೀಡುವಂತೆ ಒತ್ತಾಯ ಮಾಡಿದ್ದಾರೆ.

ಇದಲ್ಲದೆ ಬೇಸಿಗೆ ಕಾಲದಲ್ಲಿ ನೀರು ಪೂರೈಕೆ, ಬೋರವೆಲ್ ದುರಸ್ತಿಗೆ 3 ಕೋಟಿ ರೂ., ನಗರಾಭಿವೃದ್ಧಿ ಪ್ರಾಧಿಕಾರದ ಅಧೀನದ 36 ಉದ್ಯಾವನಗಳ ಅಭಿವೃದ್ಧಿಗೆ 5 ಕೋಟಿ ರೂ. ಹಾಗೂ ಧರಿಯಾಪೂರ-ಕೋಟನೂರ ಜಿ.ಡಿ.ಎ. ಬಡಾವಣೆಯಲ್ಲಿರುವ 18 ಎಕರೆ ಪ್ರದೇಶದದಲ್ಲಿನ ಉದ್ಯಾನವನ ಅಭಿವೃದ್ಧಿಗೆ 5 ಕೋಟಿ ರೂ. ಅನುದಾನ ನೀಡುವಂತೆ ಮನವಿ ಪತ್ರದಲ್ಲಿ ಕೇಳಿಕೊಂಡಿದ್ದಾರೆ.

ಎಸ್.ಸಿ.-ಎಸ್.ಟಿ. ಕಾಲೋನಿ ಅಭಿವೃದ್ಧಿಗೆ 20 ಕೋಟಿ ರೂ. ನೀಡಿ :

ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬರುವ 23 ವಾರ್ಡುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಎಸ್.ಸಿ-ಎಸ್.ಟಿ ಜನ ವಾಸಿಸುತ್ತಿದ್ದು, ಪರಿಶಿಷ್ಟರ ಕಾಲೋನಿಯಲ್ಲಿ ಸಂಪರ್ಕ ರಸ್ತೆ, ಚರಂಡಿ ಇಲ್ಲ. ಮೂಲಸೌಕರ್ಯ ಬಲಪಡಿಸಲು 20 ಕೋಟಿ ರೂ. ವಿಶೇಷ ಅನುದಾನ ಒದಗಿಸಬೇಕೆಂದು ಶಾಸಕ ಅಲ್ಲಮಪ್ರಭು ಪಾಟೀಲ್‌ ಮನವಿ ಮಾಡಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News