ಕಲಬುರಗಿ | ಸಾವಿತ್ರಿಬಾಯಿ ಫುಲೆ ಸಾಧನೆ ಎಲ್ಲರಿಗೂ ಮಾದರಿ : ಡಿಸಿ ಫೌಝಿಯಾ ತರನ್ನುಮ್

Update: 2025-01-03 14:51 GMT

ಕಲಬುರಗಿ : ಕೌಶಲ್ಯಕ್ಕೆ ಇಂದಿನ ದಿನದಲ್ಲಿ ಅವಕಾಶದ ಬಾಗಿಲು ತೆರೆದಿದೆ, ಕೌಶಲ್ಯ ಕಲಿಕೆಯಲ್ಲಿ ಏಕಾಗ್ರತೆಯಿಂದ ತೊಡಗಿಸಿಕೊಂಡು ಸಾಧನೆ ಮಾಡುವಂತೆ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಮಕ್ಕಳಿಗೆ ಕರೆ ನೀಡಿದರು.

ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಜಯಂತಿಯನ್ನು ಜ್ಯೋತಿ ಬೆಳಗಿಸಿ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ಸಂಕಷ್ಟಗಳಲ್ಲೇ ಸಾವಿತ್ರಿಬಾಯಿ ಫುಲೆ ಅಕ್ಷರ ಕಲಿತು ಸಾಧನೆ ಮಾಡಿದರು. ಸಮಾಜದಲ್ಲಿನ ಸಾಕಷ್ಟು ಅಪಮಾನಗಳನ್ನು ಅವರು ಸಹಿಸಿಕೊಂಡು ಸಾಧನೆ ಮಾಡಿದರು. ಅದಕ್ಕೆಂದೇ ನಾವಿಂದು ಅವರನ್ನ ಪೂಜಿಸುತ್ತೇವೆ. ಅದೇ ರೀತಿ ನೀವೆಲ್ಲರೂ ಯಾವುದೇ ಸಂಕಷ್ಟ ತಮಗಿದ್ದರೂ ಅವುಗಳನ್ನು ಬದಿಗೊತ್ತಿ ಮನೆತನ ಹಾಗೂ ಪೋಷಕರಿಗೆ ಹೆಸರು ಬರುವಂತೆ ಶಿಕ್ಷಣ ಕಲಿತು ಬದುಕಲ್ಲಿ ಮುಂದೆ ಬನ್ನಿರೆಂದು ತಮ್ಮ ಮಾತುಗಳಲ್ಲಿ ಸೇರಿದ್ದ ಮಕ್ಕಳಲ್ಲಿ ಸ್ಫೂರ್ತಿ ತುಂಬಿದರು.

ಸಮಾರಂಭದಲ್ಲಿ ವಿಶೇಷ ಉಫನ್ಯಾಸ ನೀಡಿದ ನಿವೃತ್ತ ಪ್ರಾಚಾರ್ಯರಾದ ನೀಲಾಂಬಿಕಾ ಪೊಲೀಸ್ ಪಾಟೀಲ್ ಅವರು ಸಾವಿತ್ರಿ ಬಾಯಿ ಫುಲೆಯವರ ಬದುಕು- ಸಾಧನೆ ವಿವರಿಸಿದರು. ವಿದ್ಯಾರ್ಥಿಗಳು ಮೊಬೈಲ್ ನಿಂದ ದೂರ ಉಳಿದು ಪುಸ್ತಕಗಳತ್ತ ಗಮನ ಹರಿಸುವಂತೆ ಕರೆ ನೀಡಿದರು.

ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಚಾರ್ಯ ಮರುಳೀಧರ ರತ್ನಗಿರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ಕಿರುಪರಿಚಯದ ಜೊತೆಗೇ ಅಕ್ಷರದವ್ವನ ಫುಲೆಯವರ ಜಯಂತಿ ಆಚರಣೆಯ ಮಹತ್ವ ಹೇಳಿದರು.

ಉದ್ಯೋಗ ವಿನಿಮಯ ಕಚೇರಿಯ ಉಪ ನಿರ್ದೇಶಕಿ ಭಾರತಿ, ತರಬೇತಿ ಅಧಿಕಾರಿ ಭಾರತಿ ಮಹಾದೇವಪ್ಪ ನಿರೂಪಿಸಿದರು. ಕಿರಿಯ ತರಬೇತಿ ಅಧಿಕಾರಿಗಳಾದ ಮಲ್ಲಮ್ಮ ಸ್ವಾಗತಿಸಿದರು. ವಿಜಯಕುಮಾರ್ ಮೇಳಕುಂದಿ ಅತಿಥಿ ಪರಿಚಯ ಮಾಡಿದರು. ಮೀನಾಕ್ಷಿ ಅವಧಾನಿ ವಂದಿಸಿದರು. ಸಂಸ್ಥೆಯ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ, ಎಲ್ಲಾ ಟ್ರೇಡ್ನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News