ಕಲಬುರಗಿ | ಜ.5ರಂದು 12ಸಾಧಕರಿಗೆ ಸಾಹಿತ್ಯ ಸಾರಥಿ ಪ್ರಶಸ್ತಿ ಪ್ರದಾನ : ಬಿ.ಎಚ್.ನಿರಗುಡಿ
ಕಲಬುರಗಿ : ರಾಜ್ಯಮಟ್ಟದ ಸಾಹಿತ್ಯಿಕ ಮಾಸ ಪತ್ರಿಕೆ ಸಾಹಿತ್ಯ ಸಾರಥಿ ಏಳು ವರ್ಷಗಳಿಂದ ನಿರಂತರವಾಗಿ ಸಂಭ್ರಮ ಮಾಡುತ್ತಾ ಬರುತ್ತದೆ. ಅದರ ಪ್ರಯುಕ್ತ ಸಂಚಿಕೆ ಬಿಡುಗಡೆ ಹಾಗೂ 2024ನೇ ಸಾಲಿನ 12ಜನ ಸಾಧಕರನ್ನು ಇದೇ ಜ.5ರಂದು ನಗರದ ಜಗತ್ ವೃತ್ತದ ಬಳಿ ಇರುವ ಪತ್ರಿಕಾ ಭವನದ ಸಭಾಂಗಣದಲ್ಲಿ ರಾಜ್ಯ ಮಟ್ಟದ 'ಸಾಹಿತ್ಯ ಸಾರಥಿ' ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪತ್ರಿಕೆ ಸಂಪಾದಕ, ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಬಿ.ಎಚ್.ನಿರಗುಡಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಶ್ರೀನಿವಾಸ ಸರಡಗಿಯ ರೇವಣಸಿದ್ಧ ಶಿವಾಚಾರ್ಯರು, ಮುಗುಳನಾಗವದ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಸಾನಿಧ್ಯ ವಹಿಸುವರು, ಕಾರ್ಯಕ್ರಮ ಉದ್ಘಾಟನೆ ಶಾಸಕರಾದ ಅಲ್ಲಮಪ್ರಭು ಪಾಟೀಲ್ ನೆರವೇರಿಸುವರು. ವಿಧಾನ ಪರಿಷತ್ ಶಾಸಕರಾದ ಶಶೀಲ್ ನಮೋಶಿ ಸಂಚಿಕೆ ಬಿಡುಗಡೆ ಮಾಡುವರು. ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ರಾಜ್ಯ ಅಧ್ಯಕ್ಷರಾದ ನಾಡೋಜ ಮನು ಬಳಿಗಾರ್ ರವರು ಪ್ರಶಸ್ತಿ ಪ್ರದಾನ ಮಾಡುವರು. ಮುಖ್ಯ ಅತಿಥಿಗಳಾಗಿ ಡಾ.ಸುರೇಶ್ ಸಜ್ಜನ, ನೀಲಕಂಠರಾವ ಮೂಲಗೆ, ಬಾಬುರಾವ್ ಯಡ್ರಾಮಿ ಆಗಮಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಂಗಾಯಣ ನಿರ್ದೇಶಕರಾದ ಡಾ.ಸುಜಾತಾ ಜಂಗಮ ಶೆಟ್ಟಿ ವಹಿಸುವರು ಎಂದು ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಕಿರಣ್ ಪಾಟೀಲ್, ಚಾಮರಾಜ ದೊಡ್ಡಮನಿ, ಸೂರ್ಯಕಾಂತ್ ಪೂಜಾರಿ ಕನ್ನಡ ಗೀತೆಗಳನ್ನು ಹಾಡುವರು ಎಂದು ಮಾಹಿತಿ ನೀಡಿದ್ದಾರೆ.
ಮಾಧ್ಯಮ ಕ್ಷೇತ್ರದಲ್ಲಿ ದೇವು ಪತ್ತಾರ್ ಬುಕ್ ಬ್ರಹ್ಮ, ವಿಶ್ವರಾಧ್ಯ ಸತ್ಯಂಪೇಟೆ, ಜಯತೀರ್ಥ ಪಾಟೀಲ್, ಸಾಹಿತ್ಯ ಕ್ಷೇತ್ರ ವಿಭಾಗದಲ್ಲಿ ಡಾ.ಕಾವ್ಯಶ್ರೀ ಮಾಹಾಗಾಂಕರ್, ಡಾ.ಲಿಂಗಣ್ಣ ಗೋನಾಳ, ಡಾ.ಚಿ.ಸಿ.ನಿಂಗಣ್ಣ, ಸಮಾಜ ಸೇವೆಯ ವಿಭಾಗದಲ್ಲಿ ರವೀಂದ್ರ ಶಾಬಾದಿ, ಕಲ್ಯಾಣರಾವ ಶೀಲವಂತ, ವೈದ್ಯಕೀಯ ಕ್ಷೇತ್ರದ ವಿಭಾಗದಲ್ಲಿ ಸಿದ್ದು ಪಾಟೀಲ್, ಶಿಕ್ಷಣ ಕ್ಷೇತ್ರದ ವಿಭಾಗದಲ್ಲಿ ಚಕೋರ ಮೆಹತಾ, ಕಲಾ ಕ್ಷೇತ್ರದ ವಿಭಾಗದಲ್ಲಿ ಡಾ.ಅಶೋಕ ಶಟಗಾರ, ಸಂಗೀತ ಕ್ಷೇತ್ರದಲ್ಲಿ ಡಾ.ರೇಣುಕಾ ಹಾಗರಗುಂಡಗಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.