ಕಲಬುರಗಿ | 11 ಮಧ್ಯಮ ನೀರಾವರಿ ಯೋಜನೆಗಳ ಸಮಿತಿ ರಚಿಸುವಂತೆ ಆಗ್ರಹ
ಕಲಬುರಗಿ : ಕಲಬುರಗಿ, ಬೀದರ್ ಮತ್ತು ಯಾದಗಿರಿ ಜಿಲ್ಲೆಗಳ 11 ಮಧ್ಯಮ ನೀರಾವರಿ ಯೋಜನೆಗಳನ್ನು ಸಕ್ರಿಯಗೊಳಿಸಲು ರಾಜ್ಯ ಸರಕಾರ ಸಮಿತಿ ರಚಿಸುವಂತೆ ಭೀಮಾ ಮಿಷನ್ ಅಧ್ಯಕ್ಷರಾದ ಭೀಮಶೆಟ್ಟಿ ಮುಕ್ಕಾ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಒತ್ತಾಯಿಸಿದ್ದಾರೆ.
ಈ ಕುರಿತು ಮನವಿ ಮಾಡಿರುವ ಅವರು, ಭೀಮಾ ಏತ ನೀರಾವರಿ, ಅಮರ್ಜಾ, ಗಂಡೂರಿ ನಾಲ, ಬೆಣ್ಣೆತೊರಾ, ಲೋವರ್ ಮುಲ್ಲಾ ಮರಿ, ಚಂದ್ರಂಪಳ್ಳಿ, ಚುಳುಕಿ ನಾಲ, ಕಾರಂಜ, ಅಪ್ಪರ್ ಮುಲ್ಲಾಮಾರಿ, ಹತ್ತಿಕುಣಿ, ಸೌದಾಗರ್ ಮಧ್ಯಮ ನೀರಾವರಿ ಯೋಜನೆಗಳಿದ್ದು, ಕಲಬುರಗಿ ಜಿಲ್ಲೆಯಲ್ಲಿ 6 ಜಲಾಶಯಗಳಿವೆ ನೀರಿನ ಸಂಗ್ರಹದ ಸಾಮರ್ಥ್ಯ 14.848 TMC ಇದೆ. ಇವುಗಳಿಂದ ಒಟ್ಟು 1,67,294.78 ಎಕರೆಯಷ್ಟು ನೀರಾವರಿಯಾಗಬೇಕಾಗಿತ್ತು. ಅಂದರೆ ಶೇ.90 ರಷ್ಟು ನೀರಿದೆ. ಇದರ ಉಪಯೋಗ ರೈತರಿಗೆ ಆಗುತ್ತಿಲ್ಲ. ಈ ಜಲಾಶಯಗಳಲ್ಲಿ ನೀರಿದ್ದು, ಕಾಲುವೆಗಳಿವೆ ಆದರೆ ರೈತರ ಹೊಲಗಳಿಗೆ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದಿದ್ದಾರೆ.
ಅದರಂತೆ ಬೀದರ್ ಜಿಲ್ಲೆಯಲ್ಲಿರುವ 3 ಜಲಾಶಯಗಳು ಕೂಡ ನೀರಿನಿಂದ ತುಂಬಿವೆ. ಅವುಗಳ ಒಟ್ಟು ನೀರಿನ ಸಂಗ್ರಹದ ಸಾಮರ್ಥ್ಯ 9.378 TMC ಇದೆ. ಮೂರು ಜಲಾಶಯಗಳಲ್ಲಿ 8.988 TMC ನೀರು ಇದೆ . ಅಂದರೆ ಶೇ.96 ರಷ್ಟು ನೀರಿದೆ. ಇವುಗಳಿಂದ ಒಟ್ಟು 73,965.99 ಎಕರೆಯಷ್ಟು ನೀರಾವರಿಯಾಗಬೇಕಾಗಿತ್ತು. ಇದು ಸಹ ರೈತರ ಜಮೀನುಗಳಿಗೆ ನೀರಿಲ್ಲ. ಯಾದಗಿರಿ ಜೆಲ್ಲೆಯಲ್ಲಿ 2 ಜಲಾಶಯಗಳಿವೆ. ಅವುಗಳ ಒಟ್ಟು ನೀರಿನ ಸಂಗ್ರಹದ ಸಾಮರ್ಥ್ಯ 0.639 TMC ಇದೆ. ಮೂರು ಜಲಾಶಯಗಳಲ್ಲಿ 0.638 TMC ನೀರು ಇದೆ. ಅಂದರೆ ಶೇ.100 ರಷ್ಟು ನೀರಿದೆ. ಇವುಗಳಿಂದ ಒಟ್ಟು 8,801.88 ಎಕರೆಯಷ್ಟು ನೀರಾವರಿಯಾಗಬೇಕು. ಹೀಗೆ ಜಲಾಶಯಗಳು ನೀರಿನಿಂದ ತುಂಬಿದ್ದು ಅವು ಸಹ ರೈತರಿಗೆ ಅನುಕೂಲವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ ಎಂದು ನೀರಾವರಿ ಇಲಾಖೆ ಹೇಳಿಕೆ ಅಪ್ಪಟ ಸುಳ್ಳು. ಯಾವುದೇ ಡಿಸ್ಟ್ರಿಬುಟರ್ ನಿಂದ ನೀರು ಬಿಟ್ಟಿಲ್ಲ. ಒಂದು ವೇಳೆ ನೀರು ಬಿಟ್ಟಿದ್ದೆಯಾದರೆ ಎಷ್ಟು ನೀರು ಬಿಡಲಾಗಿದೆ, ಎಷ್ಟು ಏಕರೆಗೆ ನೀರು ಬೀಡಲಾಗಿದೆ? ಏಷ್ಟು ರೈತರಿಗೆ ಇದರಿಂದ ಉಪಯೋಗವಾಗಿದೆ? ಈ ನೀರಾವರಿಯಿಂದ ಎಷ್ಟು ಹಣ ತೆರಿಗೆ ರೂಪದಲ್ಲೆ ಬಂದಿದೇ? ಎಂಬುವುದನ್ನು ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದ್ದಾರೆ.