ಕಲಬುರಗಿ | ಕಬ್ಬಿನ ಟ್ರ್ಯಾಕ್ಟರ್- ಟಂಟಂ ಢಿಕ್ಕಿ: ಇಬ್ಬರು ಮೃತ್ಯು
Update: 2024-12-31 17:58 GMT
ಕಲಬುರಗಿ : ಕಬ್ಬಿನ ಟ್ರ್ಯಾಕ್ಟರ್ ಮತ್ತು ಟಂಟಂ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಮಹಿಳೆ ಸೇರಿ ಇಬ್ಬರು ಮೃತಪಟ್ಟ ಘಟನೆ ಯಡ್ರಾಮಿ ತಾಲ್ಲೂಕಿನ ಮಳ್ಳಿ ಗ್ರಾಮದ ರಸ್ತೆಯಲ್ಲಿನ ಸುಂಬಡ್ ಗ್ರಾಮದ ಇಂದಿರಾಗಾಂಧಿ ವಸತಿ ನಿಲಯದ ಹತ್ತಿರ ನಡೆದಿದೆ.
ಅಯ್ಯಪ್ಪ ಮಲ್ಲಪ್ಪ ಯತ್ನಾಳ್ (37) ಹಾಗೂ ಬಸಮ್ಮ ಹಣಮಂತ್ ಚಲವಾದಿ (45) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಅಪಘಾತದಲ್ಲಿ ಬಸವರಾಜ್ ಕಾಳಪ್ಪ ಯತ್ನಾಳ್, ನಿರ್ಮಲಾ ಬಸವರಾಜ್ ಯತ್ನಾಳ್, ಮಾನಮ್ಮ ಕಾಳಪ್ಪ ಯತ್ನಾಳ್, ಕುಮಾರಿ ಮಧು ಹಣಮಂತ್ ಚಲವಾದಿ ಅವರು ಗಂಭೀರವಾಗಿ ಗಾಯಗೊಂಡಿದ್ದು, ಇವರನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಹುಣಸಗಿ ಗ್ರಾಮದಲ್ಲಿ ಜಾವುಳ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ಸ್ವಗ್ರಾಮಕ್ಕೆ ಬರುವಾಗ ಈ ಅಪಘಾತ ಸಂಭವಿಸಿದ್ದು, ಅಪಘಾತದ ನಂತರ ಟ್ರ್ಯಾಕ್ಟರ್ ಚಾಲಕನು ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಸ್ಥಳೀಯ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.