ಜನರ ಮಧ್ಯೆ ವೈಷಮ್ಯ ಬಿತ್ತುವುದೇ ಬಿಜೆಪಿ ಕೆಲಸ : ಸಚಿವ ಡಾ.ಶರಣಪ್ರಕಾಶ್ ಪಾಟೀಲ್

Update: 2025-01-01 10:50 GMT

ಡಾ.ಶರಣಪ್ರಕಾಶ್ ಪಾಟೀಲ್

ಕಲಬುರಗಿ : ಬಿಜೆಪಿಯವರು ಕೆಲಸ ಕೇವಲ ಜನರ ಮಧ್ಯೆ ವೈಷಮ್ಯ ಬಿತ್ತೋದೆ ಆಗಿದೆ, ಅವರು ಎಂದಿಗೂ ಸಾರ್ವಜನಿಕ ಹಿತಾಸಕ್ತಿಯ ಬಗ್ಗೆ ಮಾತನಾಡೋದೆ ಇಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರಿಗೆ ಜನರ ಮಧ್ಯ ಜಗಳ ಹಚ್ಚೋದೆ ಬಿಜೆಪಿ ಕೆಲಸವಾಗಿದೆ, ಜನರ ಬದುಕನ್ನು ಕಟ್ಟಿಕೊಡ ಬಗ್ಗೆ ಮಾತನಾಡೋದೆ ಇಲ್ಲ, ಬಿಜೆಪಿ ನಮಗೆ ಭ್ರಷ್ಟಾಚಾರದ ಬಗ್ಗೆ ಪಾಠ ಹೇಳೊಕೆ ಹೊರಟಿದೆ. ಅವರಿಗೆ ನಾಚಿಕೆಯಾಗಬೇಕು, ಹೇಸಿಗೆ ಕೆಲಸಗಳನ್ನು ಮಾಡಿ ನಮಗೆ ಪಾಠ ಹೇಳ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

ಈ ಹೊಸ ವರ್ಷದಿಂದ ಹೊಸ ಗುರಿಯನ್ನು ಇಟ್ಟುಕೊಂಡು ಕೆಲಸ ಮಾಡುತ್ತೇವೆ, ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಕೌಶಲ್ಯಾಭಿವೃದ್ದಿ ಇಲಾಖೆಯಿಂದ ಬಹಳಷ್ಟು ಕೆಲಸ ಇದೆ. ಕಲಬುರಗಿಯಲ್ಲಿ ಜಯದೇವ ಆಯ್ತು, ನನ್ನ ಮುಂದಿನ ಗುರಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಮಾಡೋದು. ಅಲ್ಲದೇ ಕ್ಯಾನ್ಸರ್ ಆಸ್ಪತ್ರೆ, ಇಂದಿರಾಗಾಂಧಿ ರಾಷ್ಟ್ರೀಯ ಮಕ್ಕಳ ಆಸ್ಪತ್ರೆಗೆ ಶೀಘ್ರದಲ್ಲಿ ಅಡಿಗಲ್ಲು ಹಾಕುತ್ತೇವೆ ಎಂದರು.

ಗುತ್ತಿಗೆದಾರನ ಆತ್ಮಹತ್ಯೆಗೂ ಪ್ರಿಯಾಂಕ್ ಖರ್ಗೆಗೂ ಸಂಬಂಧವಿಲ್ಲ :

ಗುತ್ತಿಗೆದಾರನ ಆತ್ಮಹತ್ಯೆಗೂ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೂ ಸಂಬಂಧವಿಲ್ಲ. ಅವರದ್ದೇ ಸರ್ಕಾರ ಇದ್ದಾಗ ಒಂದೇ ಒಂದು ಕೇಸ್ ಸಿಬಿಐಗೆ ಕೊಟ್ಟಿರಲಿಲ್ಲ. ಗುತ್ತಿಗೆದಾರ ಆತ್ಮಹತ್ಯೆ ಕೇಸ್ ನಲ್ಲಿ ಯಾವುದೇ ಹುರುಳಿಲ್ಲ. ಸಿಐಡಿ ತನಿಖೆಯ ವರದಿ ಬರಲಿ. ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಬಿಜೆಪಿ ವಿಪಕ್ಷವಾಗಿ ಫೆಲ್ಯೂವರ್ ಆಗಿದೆ. ಅವರಿಗೆ ಜನರ ಬದುಕಿನ ಬಗ್ಗೆ ಚಿಂತೆಯೇ ಇಲ್ಲ. ಹೇಗಾದರೂ ಮಾಡಿ ಜನರ ಮಧ್ಯ ಜಗಳ ಹಚ್ಚಬೇಕು. ಅಧಿಕಾರಕ್ಕೆ ಬರಬೇಕು ಲೂಟಿ ಮಾಡಬೇಕು ಎನ್ನೋದೆ ಬಿಜೆಪಿ ಉದ್ದೇಶವಾಗಿದೆ ಎಂದು ಕಿಡಿಕಾರಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News