ರಾಜು ಕಪನೂರಗೆ ಪರಮಾಪ್ತರಾಗಿರುವ ಬಿಜೆಪಿ ಶಾಸಕ ಬಸವರಾಜ್ ಮತ್ತಿಮಡು ರಾಜೀನಾಮೆ ಯಾವಾಗ? : ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ

Update: 2024-12-31 14:22 GMT

ಪ್ರಿಯಾಂಕ್ ಖರ್ಗೆ

ಕಲಬುರಗಿ : ಆತ್ಮಹತ್ಯೆ ಮಾಡಿಕೊಂಡ ಸಚಿನ್ ಪಾಂಚಾಳ ಬರೆದಿದ್ದ ಎನ್ನಲಾಗಿರುವ ಡೆತ್ ನೋಟ್ ನಲ್ಲಿ ಮೊದಲ ಹೆಸರಿರುವ ರಾಜು ಕಪನೂರಗೆ ಪರಮಾಪ್ತರಾಗಿರುವ ಬಿಜೆಪಿ ಶಾಸಕ ಬಸವರಾಜ್ ಮತ್ತಿಮಡು ಅವರ ರಾಜೀನಾಮೆ ಯಾವಾಗ ಪಡೆಯುತ್ತೀರಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

ಬಿಜೆಪಿ 'ಎಕ್ಸ್' ಖಾತೆಯಲ್ಲಿ ಬರೆದುಕೊಂಡಿರುವ ಪೋಸ್ಟ್ ವೊಂದಕ್ಕೆ ಪ್ರತಿಕ್ರಿಯಿಸಿರುವ ಸಚಿವ ಖರ್ಗೆ ಅವರು, ಕಲಬುರಗಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ್ ಮತ್ತಿಮಡು ಅವರು ನನ್ನ ಸಹೋದರ ಎಂದು ರಾಜು ಕಪನೂರ್ ಹೇಳಿರುವ ವಿಡಿಯೋ, ಮತ್ತಿಮಡು ಮತ್ತು ಕಲಬುರಗಿ ನಗರ ಬಿಜೆಪಿ ಅಧ್ಯಕ್ಷರಾಗಿರುವ ಚಂದು ಪಾಟೀಲ್ ಅವರೊಂದಿಗೆ ಇರುವ ಫೋಟೋಗಳನ್ನು 'ಎಕ್ಸ್ ' ನಲ್ಲಿ ಪ್ರಕಟಿಸಿದ್ದಾರೆ.

ನಿಮ್ಮದೇ ಪಕ್ಷದ ಅಭ್ಯರ್ಥಿಗಳು ಯಾರು, ನಿಮ್ಮದೇ ಪಕ್ಷದ ಶಾಸಕರು ಯಾರು, ನಿಮ್ಮದೇ ಪಕ್ಷದ ಮುಖಂಡರು ಯಾರು ಎಂದು ಗುರುತು ಹಿಡಿಯಲು ಸಾಧ್ಯವಾಗುವುದಾದರೆ ಈ ಫೋಟೋಗಳಲ್ಲಿ ಇರುವ ನಿಮ್ಮವರನ್ನು ಗುರುತಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಟಾಂಗ್ ನೀಡಿದ್ದಾರೆ.

ಹಲವು ಬಿಜೆಪಿ ಮುಖಂಡರು, ಶಾಸಕರು ರಾಜು ಕಪನೂರಗೆ ಪರಮಾಪ್ತರಿದ್ದಾರೆ, ಅವರ ರಾಜೀನಾಮೆಯನ್ನು ಯಾವಾಗ ಕೇಳುವಿರಿ ಎಂದು ಬಿಜೆಪಿಗೆ ಟ್ಯಾಗ್ ಮಾಡಿ ಪ್ರಶ್ನೆ ಮಾಡಿದ್ದಾರೆ.

ಮುತ್ತಿಗೆ ಹಾಕಲು ಬರುವಾಗ ವಿಜಯೇಂದ್ರರವರು ತಮ್ಮ ಪಕ್ಷದ ಯಾವ ಯಾವ ಶಾಸಕರು ರಾಜು ಕಪನೂರ ಜೊತೆಗೆ ಆಪ್ತರಾಗಿದ್ದಾರೆ ಎನ್ನುವ ಬಗ್ಗೆ ಹೋಮ್ ವರ್ಕ್ ಮಾಡಿಕೊಂಡು ಬರುವುದು ಉತ್ತಮ. ಕಲಬುರಗಿ ಮನೆಗೆ ಮುತ್ತಿಗೆಗೆ ಬರುವಾಗ ಈ ಎಲ್ಲಾ ಫೋಟೋಗಳನ್ನೂ ಹಿಡಿದು ಬರಬೇಕು ಎಂದು ನನ್ನ ಮನವಿ ಎಂದು ಸಚಿವ ಖರ್ಗೆ ಬರೆದಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News