ಕಲಬುರಗಿ: ಕಲಾವಿದ ರಹ್ಮಾನ್ ಪಟೇಲ್ ರಿಗೆ ‘ಅತ್ಯುತ್ತಮ ಸೃಷ್ಟಿ ತೀರ್ಪುಗಾರರ ಆಯ್ಕೆ ಪ್ರಶಸ್ತಿ' ಪ್ರದಾನ
Update: 2024-12-29 07:31 GMT
ಕಲಬುರಗಿ: ಬೆಂಗಳೂರಿನ ಜೈನ್ ವಿಶ್ವವಿದ್ಯಾನಿಲಯವು ಶನಿವಾರ ಆಯೋಜಿಸಿದ್ದ ಭಾರತ ಅಂತಾರಾಷ್ಟ್ರೀಯ ಕಲಾ ವಾರ್ಷಿಕ ಪ್ರದರ್ಶನದಲ್ಲಿ ಕಲಬುರಗಿಯ ಕಲಾವಿದ ರಹ್ಮಾನ್ ಪಟೇಲ್ ಅವರಿಗೆ ‘ಅತ್ಯುತ್ತಮ ಸೃಷ್ಟಿ ತೀರ್ಪುಗಾರರ ಆಯ್ಕೆ ಪ್ರಶಸ್ತಿ’ನೀಡಿ ಗೌರವಿಸಲಾಯಿತು.
ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಪ್ರಾದೇಶಿಕ ನಿರ್ದೇಶಕ ಮಹೇಂದ್ರ ಡಿ., ಕರ್ನಾಟಕ ಶಿಲ್ಪಕಲಾ ಅಕಾಡಮಿಯ ಅಧ್ಯಕ್ಷ ಎಂ.ಸಿ.ರಮೇಶ್, ಖ್ಯಾತ ಶಿಲ್ಪಿ ಹಾಗೂ ಚಿತ್ರಕಲಾವಿದ ದೇವಿದಾಸ್ ಖತ್ರಿ ಪ್ರಶಸ್ತಿ ಪ್ರದಾನ ಮಾಡಿದರು.
ವಸ್ತು ಪ್ರದರ್ಶನದ ಸಂಚಾಲಕ ಡಾ.ಅವಿನಾಶ್ ಡಿ. ಕಾಟೆ ಅಧ್ಯಕ್ಷತೆ ವಹಿಸಿದ್ದರು.
ಕೊರೋನ ಸಾಂಕ್ರಾಮಿಕ ಸಮಯದಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ರಚಿಸಲಾದ ಪಟೇಲ್ ಅವರ ಚಿತ್ರಕಲೆ ‘ದಿ ಲಾಸ್ಟ್ ಆಪ್ಷನ್’ಗಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಪ್ರದರ್ಶನವು ಡಿಸೆಂಬರ್ 30 ರವರೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ.