ಕಲಬುರಗಿ | ಬಾವಿಯಲ್ಲಿ ಈಜಲು ಹೋಗಿದ್ದ ಯುವಕ ನೀರು ಪಾಲು
Update: 2024-06-19 13:54 IST

ಕಲಬುರಗಿ : ಬಾವಿಯಲ್ಲಿ ಈಜಲು ಹೋಗಿದ್ದ ಯುವಕನೊಬ್ಬ ಮುಳುಗಿ ನೀರುಪಾಲಾಗಿರುವ ಘಟನೆ ಇಲ್ಲಿನ ತಾವರಗೇರಾ ಗ್ರಾಮದಲ್ಲಿ ಮಂಗಳವಾರ ನಡೆದಿದ್ದು, ನಿನ್ನೆಯಿಂದ ಯುವಕನ ಪತ್ತೆಗೆ ಬಾವಿಯಲ್ಲಿ ಶೋಧಕಾರ್ಯ ನಡೆದಿರುವುದಾಗಿ ವರದಿಯಾಗಿದೆ.
ತಾವರಗೇರ ಗ್ರಾಮದ ನಿವಾಸಿಯಾಗಿದ ಅಬ್ದುಲ್ ಖಾದರ್ (27) ನೀರುಪಾಲದ ಯುವಕ ಎಂದು ಗುರುತಿಸಲಾಗಿದ್ದು, ಐಟಿಐ ವಿದ್ಯಾಭ್ಯಾಸ ಮುಗಿಸಿ ಎಲೆಕ್ಟ್ರಿಷನ್ ಆಗಿ ಕೆಲಸ ಮಾಡುತ್ತದ್ದ ಅಬ್ದುಲ್ ಖಾದರ್ ಮಂಗಳವಾರ ಕಲಬುರಗಿ ನಗರದ 6-7 ಸ್ನೇಹಿತರೊಂದಿಗೆ ಬಾವಿಯಲ್ಲಿ ಈಜಲು ಹೋಗಿದ್ದಾಗ ಈ ಘಟನೆ ಜರುಗಿದೆ ಎನ್ನಲಾಗಿದೆ.
ನಿನ್ನೆ ತೀವ್ರ ಶೋಧ ನಡೆಸಿದರೂ ಮೃತದೇಹ ಪತ್ತೆಯಾಗಿರಲಿಲ್ಲ. ಮೃತದೇಹದ ಪತ್ತೆಗೆ ಬಾವಿಯಲ್ಲಿರುವ ನೀರನ್ನು 3 ಕೃಷಿ ಪಂಪ ಸೆಟ್ ಮೂಲಕ ಹೊರಹಾಕಲಾಗುತ್ತಿದೆ ಎಂದು ಹೇಳಲಾಗಿದೆ. ಘಟನೆಯ ಕುರಿತು ಸಂಪೂರ್ಣ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.