ಕಲಬುರಗಿ | ಕನಕದಾಸರ ಕೀರ್ತನೆಗಳಲ್ಲಿ ಮನುಷ್ಯತ್ವದ ಸಂದೇಶಗಳಿವೆ : ಪ್ರೊ.ದಯಾನಂದ ಅಗಸರ

Update: 2024-11-18 13:30 GMT

ಕಲಬುರಗಿ : ಕನಕದಾಸರ ಪ್ರಕಾರ ಕೀರ್ತನೆಗಳಲ್ಲಿರುವ ಅಮೂಲ್ಯ ಸಾರವೆಂದರೆ ಅದು ಮಾನವ ಕುಲ ಮತ್ತು ಮನುಷ್ಯತ್ವ ಕುಲವೆಂದು ಅರ್ಥವಾಗುತ್ತದೆ ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ಹೇಳಿದ್ದಾರೆ.

ಗುಲ್ಬರ್ಗಾ ವಿಶ್ವವಿದ್ಯಾಲಯದ ಮಹಾತ್ಮಾ ಗಾಂಧಿ ಸಭಾಂಗಣದಲ್ಲಿ ಆಯೋಜಿಸಿದ ಕನಕದಾಸ ಜಯಂತೋತ್ಸವ ಸಮಾರಂಭದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಮಾತನಾಡಿದರು.

ಕನಕದಾಸರು ತಮ್ಮ ಮೌಖಿಕ ಕೀರ್ತನೆಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ಸಮಾಜಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದ್ದಾರೆ. ಅವರ ಕೀರ್ತನೆಗಳಲ್ಲಿ ಅಮೂಲ್ಯ ಸಂದೇಶಗಳು ಮತ್ತು ಪ್ರಖರ ಚಿಂತನೆಗಳಿವೆ ಎಂದರು.

ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಬಸವರಾಜ ಕೊಡಗುಂಟಿ ಮಾತನಾಡಿ, ಭಾರತೀಯ ಪರಂಪರೆಯಲ್ಲಿ ದಾಸ ಪರಂಪರೆ, ಮತ ಪಂಥಗಳಲ್ಲಿ ಅನೇಕರು ಸಾಧನೆ ಮಾಡಿದ್ದಾರೆ. ದಾಸ ಎಂಬುದು ಮಧ್ಯಯುಗದ ಪರಿಕಲ್ಪನೆಯಾಗಿದೆ. ಎಲ್ಲರೂ ದಾಸರಾಗಲು ಸಾಧ್ಯವಿಲ್ಲ. ಇಂದಿಗೂ ಹಳ್ಳಿಗಳಲ್ಲಿ ದಾಸರನ್ನು ಕಾಣುತ್ತೇವೆ. ಅವರನ್ನು ಭಿಕ್ಷುಕರೆಂದು ಕರೆಯಲಾಗುತ್ತಿದೆ. ಭಿಕ್ಷೆ ಬೇಡುವುದು ದೊಡ್ಡ ಮೌಲಿಕ ಜೀವನ ಪಡೆದುಕೊಳ್ಳುವ ಜೀವನವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ, ಕುಲಸಚಿವ ಪ್ರೊ. ರಾಜಾನಾಳ್ಕರ್ ಲಕ್ಷ್ಮಣ, ವಿದ್ಯಾವಿಷಯಕ ಪರಿಷತ್ ಸದಸ್ಯ ಪ್ರೊ.ಎಸ್.ಎನ್.ಗಾಯಕವಾಡ, ಮೌಲ್ಯ ಮಾಪನ ಕುಲಸಚಿವೆ ಪ್ರೊ.ಮೇಧಾವಿನಿ ಕಟ್ಟಿ, ಕಲಾ ನಿಕಾಯದ ಡೀನ್ ಪ್ರೊ.ಅಬ್ದುಲ್ ರಬ್ ಉಸ್ತಾದ್, ಪ್ರೊ.ರಮೇಶ್ ರಾಥೋಡ್, ಪ್ರೊ.ಕೆ.ಸಿದ್ದಪ್ಪ, ಡಾ.ಎಚ್. ಜಂಗೆ, ಬಸರಾಜ್ ಉದನೂರ್ ಮತ್ತಿತರರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News