29 ಪ್ರಕರಣಗಳನ್ನು ಭೇದಿಸಿದ ಪೊಲೀಸರು | 4.23 ಲಕ್ಷರೂ. ನಗದು, 239 ಗ್ರಾಂ ಬಂಗಾರದ ಒಡವೆ ಹಸ್ತಾಂತರ : ಎಸ್ಪಿ ಅಡ್ಡೂರು ಶ್ರೀನಿವಾಸಲು

Update: 2024-11-18 16:16 GMT

ಕಲಬುರಗಿ : 69 ಕಳ್ಳತನ ಪ್ರಕರಣಗಳಲ್ಲಿ 29 ಕೇಸ್ ಗಳನ್ನು ಯಶಸ್ವಿಯಾಗಿ ಬೆನ್ನಟ್ಟಿ, ಕಳವಾದ ವಸ್ತುಗಳನ್ನು ವಾರಸುದಾರರಿಗೆ ವಿತರಿಸಲಾಗಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ತಿಳಿಸಿದ್ದಾರೆ.

ನಗರದ ಎಸ್ಪಿ ಕಚೇರಿಯಲ್ಲಿ ಇಂದು ಪ್ರಾಪರ್ಟಿ ಪರೇಡ್ ಹಮ್ಮಿಕೊಂಡು ಜಿಲ್ಲಾ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಕಳ್ಳತನ ಪ್ರಕರಣಗಳಲ್ಲಿ ಕಳವಾದ ವಸ್ತುಗಳನ್ನು ಪತ್ತೆ ಹಚ್ಚಿ ಸಂಬಂಧಪಟ್ಟ ವಾರಸುದಾರರಿಗೆ ವಿತರಿಸಿ ಮಾತನಾಡಿದರು.

ಬಂಗಾರ, ಬೆಳ್ಳಿ, ನಗದು ಹಣ, ವಾಹನ ಮತ್ತು ಇತರೆ ವಸ್ತುಗಳ ಕಳ್ಳತನ ಪ್ರಕರಣಗಳಲ್ಲಿ ಆರೋಪಿತರನ್ನು ಪತ್ತೆ ಮಾಡಿ ಕಳ್ಳತನವಾಗಿರುವ ವಸ್ತುಗಳನ್ನು ಒಟ್ಟು 69 ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದು, ಈಗಾಗಲೇ 29 ಪ್ರಕರಣಗಳಲ್ಲಿ ನ್ಯಾಯಾಲಯದ ಆದೇಶದಂತೆ ವಶಪಡಿಸಿಕೊಂಡ ವಸ್ತುಗಳನ್ನು (ಮುದ್ದೆಮಾಲುಗಳನ್ನು) ವಾರಸುದಾರರಿಗೆ ನೀಡಲಾಗಿದೆ ಎಂದರು.

40 ಪ್ರಕರಣಗಳ 4.23 ಲಕ್ಷರೂ. ನಗದು, 239 ಗ್ರಾಂ ಬಂಗಾರದ ಒಡವೆಗಳು, 85 ಗ್ರಾಂ ಬೆಳ್ಳಿ ಒಡವೆಗಳು, 58 ದ್ವಿಚಕ್ರ ವಾಹನಗಳು, 15 ಮೊಬೈಲ್ ಫೊನ್‌ಗಳು, 2 ಮೋಟಾರ್ ಪಂಪ್ ಸೆಟ್, 1 ಬೊಲೆರೋ ಪಿಕ್ ಅಪ್, ಆಟೋರಿಕ್ಷಾ ಮತ್ತು ತೂಕದ ಮಶೀನ್ ವಾರಸುದಾರರಿಗೆ ನೀಡಲಾಯಿತು.

ಈ ಸಂದರ್ಭದಲ್ಲಿ ಹೆಚ್ಚುವರಿ ಎಸ್ಪಿ ಶ್ರೀನಿಧಿ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News