ಕಲಬುರಗಿ | ನಾಗಾವಿ ನಾಡಿನ ಸಾಂಸ್ಕೃತಿಕ ರತ್ನ ಪ್ರಶಸ್ತಿಗೆ ವಿಕ್ರಮ್ ತೇಜಸ್ ಸೇರಿ ಐವರು ಸಾಧಕರ ಆಯ್ಕೆ

Update: 2024-11-17 16:46 GMT

ಕಲಬುರಗಿ : ಚಿತ್ತಾಪುರ ತಾಲ್ಲೂಕಿನ ನಾಗಾವಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ನಡೆಯುವ ಕರ್ನಾಟಕ ರಾಜ್ಯೋತ್ಸವ ಸಾಂಸ್ಕೃತಿಕ ಸಂಭ್ರಮ ಸಮಾರಂಭದಲ್ಲಿ 2024ನೇ ಸಾಲಿನ ನಾಗಾವಿ ನಾಡಿನ ಸಾಂಸ್ಕೃತಿಕ ರತ್ನ ಪ್ರಶಸ್ತಿಗೆ ವಿವಿಧ ಕ್ಷೇತ್ರ ಸಾಧಕರನ್ನು ಆಯ್ಕೆ ಮಾಡಲಾಗಿದೆ ಎಂದು ನಾಗಾವಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ನಾಗಯ್ಯ ಸ್ವಾಮಿ ಅಲ್ಲೂರ್, ಉಪಾಧ್ಯಕ್ಷ ಲಿಂಗಣ್ಣ ಮಲ್ಕನ್, ಕಾರ್ಯದರ್ಶಿ ನರಸಪ್ಪ ಚಿನ್ನಕಟ್ಟಿ ಅವರು ತಿಳಿಸಿದ್ದಾರೆ.

ಜನಪದ ಕ್ಷೇತ್ರದಿಂದ ಮಹಾದೇವಿ ಭೀಮಾಶಂಕರ್ ಕೊಲ್ಲೂರ್, ಶಿಕ್ಷಣ ಕ್ಷೇತ್ರದಿಂದ ಕಮರವಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಶೈಲಾಶ್ರೀ, ಸಾಹಿತ್ಯ ಸಂಘಟನಾ ಕ್ಷೇತ್ರದಿಂದ ವಿಕ್ರಂ ತೇಜಸ್ ವಾಡಿ, ಮಾಧ್ಯಮ ಕ್ಷೇತ್ರದಿಂದ ಮಲ್ಲಿಕಾರ್ಜುನ್ ಮೂಡುಬಳಕರ್, ಕೃಷಿ ಕ್ಷೇತ್ರದಿಂದ ಭೀಮಸೇನ್ ರಾಮಣ್ಣ ಭೀಮನಹಳ್ಳಿ ಅವರನ್ನು ನಾಗಾವಿ ನಾಡಿನ ಸಾಂಸ್ಕೃತಿಕ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ನ.21ರಂದು ಜರುಗುವ ಸಾಂಸ್ಕೃತಿಕ ಸಂಭ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News