ಕಲಬುರಗಿ | ಕೇಂದ್ರ, ರಾಜ್ಯ ಸರಕಾರಗಳು ಜನ ವಿರೋಧಿ ನೀತಿ ಅನುಸರಿಸುತ್ತಿವೆ : ಕೆ.ನೀಲಾ

Update: 2024-11-17 15:53 GMT

ಕಲಬುರಗಿ : ಒಂದೇ ನಾಣ್ಯದ ಎರಡು ಮುಖಗಳಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳೆರಡೂ ಜನ ಸಾಮನ್ಯ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ ಆರೋಪಿಸಿದ್ದಾರೆ.

ಅವರು ಶಹಬಾದ್, ಚಿತ್ತಾಪುರ ಕಾಳಗಿ ಮತ್ತು ಸೇಡಂ ಸಮಗ್ರ ಅಭಿವೃದ್ಧಿಗಾಗಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ)ದ ವತಿಯಿಂದ ಶನಿವಾರ ಶಹಾಬಾದ್ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಹಮ್ಮಿಕೊಂಡ ʼ4ನೇ ಸಮ್ಮೇಳನದ ಭಹಿರಂಗ ಸಭೆʼಯನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ರೈತರು ಬೆಳೆ ಬೆಳೆದಿಲ್ಲ. ಕೃಷಿ ಕೂಲಿಕಾರರಿಗೆ ಉದ್ಯೋಗ ದೊರೆಯುತ್ತಿಲ್ಲ. ಹೀಗಾಗಿ ರಾಜ್ಯದಲ್ಲಿ ರೈತರು ಹಾಗೂ ಕೃಷಿ ಕೂಲಿಕಾರರು ಬೇರೆ ರಾಜ್ಯ ಹಾಗೂ ಜಿಲ್ಲೆಗಳೆಡೆಗೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಹೀಗಿದ್ದರೂ ರಾಜ್ಯ ಸರಕಾರವಾಗಲೀ, ಕೇಂದ್ರ ಸರಕಾರವಾಗಲೀ ರಾಜ್ಯದ ರೈತರ, ಕೂಲಿಕಾರರ ಕಡೆಗೆ ಗಮನಹರಿಸಿ ಅವರಿಗೆ ಸಿಗಬೇಕಾದ ಪರಿಹಾರವನ್ನು ನೀಡುವಲ್ಲಿ ವಿಫಲವಾಗಿವೆ ಎಂದು ಆರೋಪಿಸಿದರು.

ಕಾರ್ಯಕ್ರಮದಲ್ಲಿ ಶರಣಬಸಪ್ಪ ಮಮಶೆಟ್ಟಿ, ಎಂ.ಬಿ. ಜಜ್ಜನ್, ರಾಯಪ್ಪ ಹುರಮುಂಜಿ, ಶೇಕಮ್ಮ ಕುರಿ, ಕಾಶಿನಾಥ ಭಂಡೆ, ಅಯ್ಯಪ್ಪ ಸೇಡಂ, ವೀರಯ್ಯ ಸ್ವಾಮಿ, ನಾಗಪ್ಪ ರಾಯಚೂರಕರ್, ಸಾಬಣ್ಣ ಗುಡುಬಾ, ರೇವಯ್ಯ ಸ್ವಾಮಿ, ಸಿದ್ದಮ್ಮ ಮುತಗಿ, ಕ್ಷೇಮಲಿಂಗ ಭಂಕೂರ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News