ಕಲಬುರಗಿ | ಶಹಾಬಾದ್‌ನಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ

Update: 2024-11-13 12:38 GMT

ಕಲಬುರಗಿ : ಶಹಾಬಾದ್ ನಗರದ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಟಿಪ್ಪು ಸುಲ್ತಾನ್ ಅವರ 275ನೇ ಜಯಂತಿಯನ್ನು ಆಚರಿಸಲಾಯಿತು.

ಹಝ್ರತ್ ಟಿಪ್ಪು ಸುಲ್ತಾನ್‌ ಗ್ರೂಪ್ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮೌಲಾನಾ ಖಮರಸಾಬ ಮಾತನಾಡಿ, ಬ್ರಿಟಿಷರ ಕಪಿಮುಷ್ಠಿಗೆ ಒಳಗಾಗುತ್ತಿದ್ದ ಭಾರತವನ್ನು ಸ್ವಾತಂತ್ರ್ಯ ಗೊಳಿಸಬೇಕೆಂದು ಸೈನ್ಯ ಕಟ್ಟಿ ಯುದ್ದ ನೀತಿಗಳನ್ನು ರೂಪಿಸಿ, ಸ್ವಾತಂತ್ರ್ಯದ ಕಿಡಿಯನ್ನು ಹೊತ್ತಿಸಿದ್ದ ಟಿಪ್ಪು ಅವರ ಅಪ್ರತಿಮ ಹೋರಾಟದ ಫಲವಾಗಿ ನಾವಿಂದು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ ಎಂದು ತಿಳಿಸಿದರು.

ನ್ಯಾಯವಾದಿ ಮಲಿಕ್‌ಪಾಷಾ ಮೌಜನ ಮಾತನಾಡಿ, ಬ್ರಿಟಿಷರು ನೇಮಕ ಮಾಡುವ ಕೆಲವೊಂದು ಗವರ್ನರ್‌ಗಳು ಅವೈಜ್ಞಾನಿಕ ಪದ್ದತಿಗಳನ್ನು ಜಾರಿಗೊಳಿಸಿ, ಭಾರತದ ಫಲವತ್ತಾದ ಸಂಪತ್ತು ಹಾಗೂ ದೇಶದ ಜನರನ್ನು ಗುಲಾಮರನ್ನಾಗಿ ದುಡಿಸಿಕೊಳ್ಳುವಂತಹ ನೀತಿಯಿಂದ ಬೇಸೆತ್ತಿದ ಟಿಪ್ಪು, ಬ್ರಿಟಿಷರ ವಿರುದ್ದ ಸಮರ ಸಾರಿದರು. ಅಲ್ಲದೆ ಆರ್ಥಿಕ ಅಭಿವೃದ್ಧಿಗಾಗಿ ರೇಷ್ಮೆ ಗೂಡುಗಳನ್ನು ನಿರ್ಮಿಸಿದರು ಎಂದರು.

ಕಾರ್ಯಕ್ರಮದಲ್ಲಿ ನದೀಮ್ ಇನಾಂದಾರ್, ದಾವಲಸಾಬ ಇನಾಂದಾರ್, ಮುಹಮ್ಮದ್ ಅಲಿ ಜಮಾದಾರ, ವಾಜೀದ ಖಾನ್ ಜಮಾದಾರ, ಮಶಾಕ ಇನಾಂದಾರ್, ಶಿವುಕುಮಾರ ನಾಟೇಕರ್, ಮಹೆಬೂಬ, ಶಫೀಕ ಇನಾಂದಾರ್, ಅಸ್ಲಮ್, ಮುಹಮ್ಮದ್ ಮೌಲಾ , ಬಾಬಾ, ಅಬ್ದುಲ್ ರಹೇಮಾನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News