ಸನ್ನತ್ತಿ ಅಭಿವೃದ್ಧಿಗೆ ಸಚಿವ ಪ್ರಿಯಾಂಕ್ ಖರ್ಗೆ ನಿಷ್ಕಾಳಜಿ: ಜಿಪಂ ಮಾಜಿ ಸದಸ್ಯ ಬೆಣ್ಣೂರಕರ್ ಆರೋಪ
ಕಲಬುರಗಿ: ಚಿತ್ತಾಪೂರ ತಾಲ್ಲೂಕಿನ ಐತಿಹಾಸಿಕ ಸ್ಥಳವಾದ ಸನ್ನತ್ತಿ ಅಭಿವೃದ್ದಿಯಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ನಿಷ್ಕಾಳಜಿ ತೋರಿಸುತ್ತಿದ್ದಾರೆ ಎಂದು ಬಿಜೆಪಿ ಗ್ರಾಮೀಣ ಜಿಲ್ಲಾ ಉಪಾಧ್ಯಕ್ಷ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಸವರಾಜ ಬೆಣ್ಣೂರಕರ್ ಗಂಭೀರ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸನ್ನತ್ತಿ ಅಭಿವೃದ್ದಿಗಾಗಿ 2006ರಲ್ಲಿ ಸನ್ನತಿ ಅಭಿವೃದ್ಧಿ ಮಂಡಳಿ ಆರಂಭವಾಗಿದೆ. ಮಂಡಳಿಗೆ ಕಲಬುರಗಿ ಜಿಲ್ಲೆಯ ಪ್ರಭಾರಿ ಜಿಲ್ಲಾ ಮಂತ್ರಿಗಳನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಉಳಿದ ಹುದ್ದೆಗಳನ್ನು ಹಿರಿಯ ಅಧಿಕಾರಿಗಳು ಹಾಗೂ ಬೌದ್ಧ ಧರ್ಮದ ಗಣ್ಯರಿಗೆ ನೀಡಲಾಗಿದೆ ಎಂದರು.
ಈ ಹಿಂದೆ ಹಲವರು ಕಲಬುರಗಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದರು. ಮಂಡಳಿ ಅಧ್ಯಕ್ಷರಾಗಿದ್ದರು. ಅರ‍್ಯಾರು ಅಭಿವೃದ್ಧಿ ಕೈಗೆತ್ತಿಕೊಳ್ಳಲಿಲ್ಲ. ಆದರೆ, ಸದ್ಯ ಸನ್ನತ್ತಿ ಅಭಿವೃದ್ಧಿ ಮಂಡಳಿಗೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರೆ ಅಧ್ಯಕ್ಷರಾಗಿದ್ದಾರೆ. ಈ ಹಿಂದೆಯೂ ಇವರೇ ಮಂತ್ರಿ ಆಗಿದ್ದರು. ಅಧ್ಯಕ್ಷರಾಗಿದ್ದರು. ಇವರು ಕೂಡ ಉಳಿದ ಸಚಿವರ ದಾರಿಯನ್ನೇ ತುಳಿದಿದ್ದಾರೆ. ಮಂಡಳಿಯ ಸಭೆ ಕರೆದು ಅಭಿವೃದ್ಧಿ ಕುರಿತು ಚರ್ಚೆ ನಡೆಸಬೇಕಿತ್ತು. ಎಲ್ಲಾ ಸದಸ್ಯರನ್ನು ಕರೆದು ಸಭೆ ನಡೆಸಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಗಮನ ಹರಿಸಬೇಕಿತ್ತು. ಅದ್ಯಾವುದನ್ನೂ ಪ್ರಿಯಾಂಕ್ ಖರ್ಗೆ ಮಾಡಲಿಲ್ಲ. ಹೀಗಾಗಿ ಸನ್ನತ್ತಿ ಅಭವೃದ್ದಿ ಮರೀಚಿಕೆಯಾಗಿದೆ ಎಂದು ಪ್ರಿಯಾಂಕ್ ವಿರುದ್ದ ಕಿಡಿಕಾರಿದ್ದಾರೆ.
2006ರಲ್ಲಿ ಕಾಗಿನೆಲೆ ಪ್ರಾಧಿಕಾರ, ಬಸವಕಲ್ಯಾಣ ಪ್ರಾಧಿಕಾರ ಸೇರಿದಂತೆ ನಾಲ್ಕು ಪ್ರಾಧಿಕಾರಗಳನ್ನು ರಚನೆ ಮಾಡಲಾಯಿತು. ಅವುಗಳೆಲ್ಲವೂ ಅಭಿವೃದ್ಧಿಯತ್ತ ಸಾಗಿವೆ. ಆದರೆ ಸನ್ನತ್ತಿ ಅಭಿವೃದ್ಧಿ ಮಂಡಳಿಯಿAದ ಮಾತ್ರ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಸನ್ನತ್ತಿಯ ಕನಗನಹಳ್ಳಿಯಲ್ಲಿ ಸಿಕ್ಕ ಅವಶೇಷಗಳು ಸಂರಕ್ಷಣೆ ಆಗುತ್ತಿಲ್ಲ. ಹಾಳು ಕೊಂಪೆಯoತಾಗಿದೆ. ಹಾವು- ಚೇಳುಗಳ ಆವಾಸ ಸ್ಥಾನವಾಗಿದೆ. ಸ್ಮಾರಕಗಳ ರಕ್ಷಣೆಯೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸನ್ನತ್ತಿ ಅಭಿವೃದ್ದಿಗಾಗಿ ಸರಕಾರ 5 ಕೋಟಿ ರೂ ಅನುದಾನ ನೀಡಿತ್ತು. ಆ ಅನುದಾನವು ಸರಿಯಾಗಿ ಬಳಕೆ ಮಾಡಿಕೊಂಡಿಲ್ಲ. ಅಭಿವೃದ್ದಿಯೂ ಆಗಿಲ್ಲ. ಕಾಟಾಚಾರಕ್ಕೆನ್ನುವಂತೆ ಕೆಲಸ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಪ್ರಿಯಾಂಕ್ ಖರ್ಗೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಬದಲಾವಣೆ ಆಗುತ್ತೆ ಎಂದು ಕನಸ್ಸು ಕಟ್ಟಿಕೊಂಡಿದ್ದೆವು. ಆಗಲಿಲ್ಲ. ಜಿಲ್ಲಾ ಉಸ್ತುವಾರಿ ಜೊತೆಯಲ್ಲಿ ಪ್ರವಾಸೋದ್ಯಮ ಇಲಾಖೆ ಸಚಿವರು ಕೂಡ ಆಗಿದ್ದರು. ಆಗಲಾದರೂ ಸನ್ನತ್ತಿ ಅಭಿವೃದ್ಧಿ ಪಥದತ್ತ ಸಾಗುತ್ತೆ ಎಂದುಕೊAಡಿದ್ದೆವು. ಅಗಲಿಲ್ಲ. ಈಗ ಅವರೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು, ಅಭಿವೃದ್ಧಿ ಕಾರ್ಯ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಇದಲ್ಲದೇ ಪ್ರತಿಯೊಂದು ಸಮೂದಾಯದ ಅಭಿವೃದ್ಧಿಗಾಗಿ ನಿಗಮ ಮಂಡಳಿಗಳನ್ನು ಸ್ಥಾಪನೆ ಮಾಡಲಾಗಿದೆ. ಆ ಮಂಡಳಿಗಳಿಗೆ ಆ ಸಮೂದಾಯದವರನ್ನೇ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಸನ್ನತ್ತಿ ಅಭಿವೃದ್ಧಿ ಮಂಡಳಿಗ್ಯಾಕೆ? ಮಂತ್ರಿಗಳು ಅಧ್ಯಕ್ಷರಾಗಿದ್ದಾರೆ ಎಂದು ಪ್ರಶ್ನೆ ಮಾಡಿದ ಬೆಣ್ಣೂರಕರ್, ಎಲ್ಲಾ ನಿಗಮ ಮಂಡಳಿಗಳoತೆ ಸನ್ನತ್ತಿ ಅಭಿವೃದ್ಧಿ ಮಂಡಳಿಗೂ ಸಮೂದಾಯದವರನ್ನೇ ಅಧ್ಯಕ್ಷರನ್ನಾಗಿ ಮಾಡಬೇಕು. ಒಂದು ವೇಳೆ ಈ ಮಂಡಳಿಗೆ ಸಮೂದಾಯದವರನ್ನು ಅಧ್ಯಕ್ಷರನ್ನಾಗಿ ಮಾಡುವಂತಿಲ್ಲ ಎಂಬ ಅಡೆತಡೆಗಳೀದ್ದರೆ ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ನಡೆಸಿ, ತಿದ್ದಪಡಿ ಮಾಡಬೇಕೆಂದು ಎಂದು ಬಸವರಾಜ ಬೆಣ್ಣೂರಕರ್ ಅವರು ಒತ್ತಾಯಿಸಿದ್ದಾರೆ.