ನವಜಾತ ಶಿಶು ಅಪಹರಣ ಪ್ರಕರಣ: ಕಲಬುರಗಿ ಜಿಲ್ಲಾಸ್ಪತ್ರೆಗೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಭೇಟಿ

Update: 2024-11-26 07:34 GMT

ಕಲಬುರಗಿ: ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಸೋಮವಾರ ಮುಂಜಾನೆ ನವಜಾತ ಶಿಶುವೊಂದರ ಅಪಹರಣ ನಡೆದಿರುವ ಹಿನ್ನೆಲೆಯಲ್ಲಿ ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಾಪ್ರಕಾಶ್ ಪಾಟೀಲ್ ಇಂದು ಬೆಳಗ್ಗೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದರು.

ಇಂದು ಬೆಳೆಗ್ಗೆ 9 ಗಂಟೆಗೆ ಸಚಿವರು, ಜಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ, ಮಗು ಕಳೆದುಕೊಂಡಿರುವ ಪೋಷಕರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಈ ವೇಳೆ ಮಗು ಆಸ್ಪತ್ರೆಯಿಂದ ಹೊರಗೆ ಹೇಗೆ ಹೋಯಿತು, ಮಗುವಿನೊಂದಿಗೆ ಯಾರು ಇದ್ದರು? ಮತ್ತಿತರ ಮಾಹಿತಿಯನ್ನು ಪಡೆದುಕೊಂಡರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿ ಮತ್ತಿತರ ಸಾಕ್ಷ್ಯಗಳನ್ನು ಕಲೆ ಹಾಕುತ್ತಿದ್ದಾರೆ.

ಸಚಿವರೊಂದಿಗೆ ಎಸಿಪಿ ಕನಿಕಾ ಸಿಕ್ರೀವಾಲ್ ಮತ್ತಿತರರು ಇದ್ದರು.

ನರ್ಸ್ ವೇಷದಲ್ಲಿ ಬಂದು ಮಗು ಅಪಹರಣ: ಕಲಬುರಗಿಯ ಜಿಮ್ಸ್ ಆಸ್ಪತ್ರೆ(GIMS)ಯಲ್ಲಿ ಸೋಮವಾರ ಮುಂಜಾನೆ ನರ್ಸ್ ವೇಷದಲ್ಲಿ ಬಂದ ಇಬ್ಬರು ಮಹಿಳೆಯರು ಚಿತ್ತಾಪೂರ ತಾಲೂಕಿನ ರಾವೂರ್ ಗ್ರಾಮದ ನಿವಾಸಿಯಾಗಿರುವ ಕಸ್ತೂರಿ ಎಂಬವರ ನವಜಾತ ಗಂಡುಮಗುವನ್ನು ಅಪಹರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News