ಆಳಂದ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರಾಗಿ ಸತತ 3ನೇ ಬಾರಿಗೆ ಶರಣಬಸಪ್ಪ ವಾಗೆ ಆಯ್ಕೆ

Update: 2025-02-17 19:30 IST
ಆಳಂದ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರಾಗಿ ಸತತ 3ನೇ ಬಾರಿಗೆ ಶರಣಬಸಪ್ಪ ವಾಗೆ ಆಯ್ಕೆ
  • whatsapp icon

ಕಲಬುರಗಿ : ಆಳಂದ ಪಟ್ಟಣದಲ್ಲಿ ಭಾನುವಾರ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್‌ನ(ಪಿಎಲ್‌ಡಿ) 5 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಶಾಸಕ ಬಿ.ಆರ್.ಪಾಟೀಲ್‌ ಅವರ ಬೆಂಬಲಿಗ ಶರಣಬಸಪ್ಪ ವಾಗೆ ಸತತ 3ನೇ ಬಾರಿಗೆ ನಿರ್ದೇಶಕರಾಗಿ ಆಯ್ಕೆಯಾಗುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

ಆಳಂದ ಸಾಲಗಾರರ ಕ್ಷೇತ್ರದಿಂದ ಶರಣಬಸಪ್ಪ ವಾಗೆ ಅವರು 431 ಮತ ಪಡೆದು ವಿಜೇತರಾದರೆ ಪ್ರತಿಸ್ಪರ್ಧಿ ಶ್ರೀಶೈಲ ಖಜೂರಿ 102 ಮತ ಪಡೆದರು. ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಬಾಬುರಾವ ಅರುಣೋದಯ, ಮುನ್ನಹಳ್ಳಿ ಕ್ಷೇತ್ರದಿಂದ ಪಂಡಿತ ಚೌಲ್, ಹಿರೋಳಿ ಮತಕ್ಷೇತ್ರದಿಂದ ವಿಶ್ವನಾಥ ಹಳಿದೊಡ್ಡಿ, ಬೆಳಮಗಿ ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಬಸವರಾಜ ಯಂಕಟಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಶಂಕ್ರೆಪ್ಪ ಪಾಟೀಲ ಮಾಹಿತಿ ನೀಡಿದರು.

ವಿಜಯೋತ್ಸವ :

ಆಳಂದ ಪಿಎಲ್‌ಡಿ ಬ್ಯಾಂಕ್‌ನ 14 ಸ್ಥಾನಗಳ ಪೈಕಿ ಈ ಮೊದಲು 9 ಸ್ಥಾನಗಳ ಅವಿರೋಧ ಆಯ್ಕೆಯಾಗಿದ್ದು, ಇವರಲ್ಲಿಯೂ ಕಾಂಗ್ರೆಸ್ ಬೆಂಬಲಿಗರೇ 8 ಜನರು ಆಯ್ಕೆಯಾಗಿ ಸಿಂಹಪಾಲು ಸಾಧಿಸಿದ್ದಾರೆ. ಉಳಿದ 5 ಸ್ಥಾನಗಳಿಗೆ ರವಿವಾರ ನಡೆದ ಚುನಾವಣೆಯಲ್ಲಿ 4 ನಿರ್ದೇಶಕರು ಶಾಸಕ ಬಿ.ಆರ್.ಪಾಟೀಲ್‌ ಬೆಂಬಲಿಗರೇ ಆಯ್ಕೆಯಾಗಿದ್ದಾರೆ. ಮತ ಎಣಿಕೆ ಮುಗಿಯುತ್ತಿದ್ದಂತೆ ಹೊರಗೆ ಕಾಂಗ್ರೆಸ್ ಬೆಂಬಲಿಗರು ಕಾರ್ಯಕರ್ತರು ಬಣ್ಣ ಎರಚಿ, ಸಿಹಿ ಹಂಚಿ ಸಂಭ್ರಮಿಸಿದರು.

ಇದರ ಜೊತೆಗೆ ಶಾಸಕ ಬಿ.ಆರ್ ಪಾಟೀಲ್ ಗೆ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನ ಸಿಕ್ಕಿರುವ ಹಿನ್ನೆಲೆಯಲ್ಲಿ ಆಳಂದ ಕ್ಷೇತ್ರದ ಕಾರ್ಯಕರ್ತರು ಡಬಲ್ ಸಂಭ್ರಮ ಆಚರಣೆ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News