ದೀಪಾವಳಿ ಪ್ರಯುಕ್ತ ಕಲಬುರಗಿ- ಬೆಂಗಳೂರು ಮಧ್ಯೆ ವಿಶೇಷ ರೈಲು

Update: 2024-10-24 03:53 GMT

ಸಾಂದರ್ಭಿಕ ಚಿತ್ರ 

 ಕಲಬುರಗಿ: ದೀಪಾವಳಿ ಹಬ್ಬದ ಪ್ರಯುಕ್ತ ಬೆಂಗಳೂರಿನ ಸರ್.ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್ಎಂವಿಟಿ) ನಿಲ್ದಾಣದಿಂದ ಕಲಬುರಗಿ ರೈಲು ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಕಲ್ಪಿಸಲಾಗಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದ್ದು, ಅಕ್ಟೋಬರ್ 31ರಂದು ಎಸ್ಎಂವಿಟಿ ಬೆಂಗಳೂರು- ಕಲಬುರಗಿ ವಿಶೇಷ ಎಕ್ಸ್‌ಪ್ರೆಸ್ ರೈಲು (06217) ಬೆಂಗಳೂರಿನಿಂದ ರಾತ್ರಿ 9.15ಕ್ಕೆ ಹೊರಟು, ಮರುದಿನ ಬೆಳಗ್ಗೆ 7.40ಕ್ಕೆ ಕಲಬುರಗಿ ರೈಲು ನಿಲ್ದಾಣಕ್ಕೆ ತಲುಪಲಿದೆ.

ನವೆಂಬರ್ 1ರಂದು 06218 ಸಂಖ್ಯೆಯ ರೈಲು ಕಲಬುರಗಿಯಿಂದ ಬೆಳಗ್ಗೆ 9.35ಕ್ಕೆ ಹೊರಟು, ರಾತ್ರಿ 8ಕ್ಕೆ ಬೆಂಗಳೂರು ಎಸ್ಎಂವಿಟಿ ತಲುಪಲಿದೆ. ಯಲಹಂಕ, ಧರ್ಮವರಂ, ಅನಂತಪುರ, ಗುಂಟಕಲ್, ಆದೋನಿ, ಮಂತ್ರಾಲಯ ರೋಡ್, ರಾಯಚೂರು, ಯಾದಗಿರಿ ಹಾಗೂ ಶಹಾಬಾದ್‌ನಲ್ಲಿ ಈ ವಿಶೇಷ ರೈಲು ನಿಲುಗಡೆಯಾಗಲಿದೆ ಎಂದು ಹೇಳಿದೆ.

ರೈಲು ಪ್ರಯಾಣಿಕರು Www.enquiry.indianrail.gov.in ಅಥವಾ NTES ಅಪ್ಲಿಕೇಷನ್ ಅಥವಾ 139 ಸಂಖ್ಯೆ ಕರೆ ಮಾಡಿ ಇತರೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬಹುದು ಎಂದು ಅದು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News