ಕಾಸರಗೋಡು: ಕರಾವಳಿ ಪೊಲೀಸ್ ರಕ್ಷಣಾ ಬೋಟ್ ನ ಇಬ್ಬರು ನೌಕರರು ಸಮುದ್ರ ಪಾಲು

Update: 2023-08-21 06:31 GMT

ಕಾಸರಗೋಡು: ಕರಾವಳಿ ಪೊಲೀಸ್ ರಕ್ಷಣಾ ಬೋಟ್ ನ ನೌಕರ ಇಬ್ಬರು ಯುವಕರು ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ರವಿವಾರ ಸಂಜೆ ನೀಲೇಶ್ವರ ದ ತೈಕಡಪ್ಪುರದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಮೃತರನ್ನು ರಾಜೇಶ್ ( 35) ಮತ್ತು ರಕ್ಷಣಾ ಬೋಟ್ ನ ನೌಕರ ಸನೀಶ್ ( 32) ಎಂದು ಗುರುತಿಸಲಾಗಿದೆ.

ಮೀನು ಹಿಡಿಯುತ್ತಿದ್ದಾಗ ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದ ರಾಜೇಶ್ ಅವರನ್ನು ರಕ್ಷಿಸಲು ಸಮುದ್ರಕ್ಕೆ ಹಾರಿದ ಸನೀಶ್ ಕೂಡಾ ನೀರುಪಾಲಾಗಿದ್ದಾರೆ.

ಕರಾವಳಿ ಪೊಲೀಸರು , ಸ್ಥಳೀಯರು ಶೋಧ ನಡೆಸಿ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಮೃತದೇಹಗಳನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News