ಕಾಸರಗೋಡಿನ ಯುವಕ ದೋಹಾದಲ್ಲಿ ಹೃದಯಾಘಾತದಿಂದ ನಿಧನ

Update: 2023-08-17 16:43 GMT

ಕಾಸರಗೋಡು: ಮೆದುಲ್ ಸ್ರಾವದಿಂದ ಕಳೆದ 25 ದಿನಗಳಿಂದ ದೋಹಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾಸರಗೋಡು ತಳಂಗರೆಯ ಯುವಕನೋರ್ವ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ತಳಂಗರೆಯ ಹಸೀಬ್ (33) ಮೃತಪಟ್ಟವರು. ದೋಹಾದಲ್ಲಿ ಟ್ರಾವೆಲ್ ಏಜೆನ್ಸಿ ನಡೆಸುತ್ತಿದ್ದರು. ಕೆಎಂಸಿಸಿಯಾ ಸಕ್ರಿಯ ಸದಸ್ಯರಾಗಿದ್ದರು.

25 ದಿನಗಳ ಹಿಂದೆ ರಾತ್ರಿ ಆಹಾರ ಸೇವಿಸಿ ಕೆಲವೇ ನಿಮಿಷದಲ್ಲಿ ಕುಸಿದು ಬಿದ್ದ ಹಸೀಬ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೆದುಳು ಸ್ರಾವ ಜೊತೆಗೆ ಹೃದಯಾಘಾತ ಉಂಟಾಗಿದ್ದು, 25 ದಿನಗಳಿಂದ ವೆಂಟಿಲೇಟರ್ ಸಹಾಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಮಂಗಳವಾರ ಮೃತಪಟ್ಟಿದ್ದಾರೆ.

ಮೃತದೇಹವನ್ನು ಗುರುವಾರ ಕಾಸರಗೋಡಿಗೆ ತರಲಾಗಿದ್ದು, ಮಾಲಿಕ್ ದಿನಾರ್ ಮಸೀದಿಯಲ್ಲಿ ದಫನ ಮಾಡಲಾಯಿತು . ಕತರ್- ಕಾಸರಗೋಡು ನಗರಸಭಾ ಕೆಎಂಸಿಸಿ ಕಾರ್ಯದರ್ಶಿಯಾಗಿದ್ದರು.

ಮೃತರು ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News