ವಿವಾಹ ಭರವಸೆ ನೀಡಿ ಲೈಂಗಿಕ ಕಿರುಕುಳ ಆರೋಪ; ಮಲಯಾಳಂ ಬಿಗ್ ಬಾಸ್ ನಟ ಶಿಯಾಝ್ ಕರೀಂ ಬಂಧನ

Update: 2023-10-05 07:10 GMT

ಕಾಸರಗೋಡು: ವಿವಾಹವಾಗುವ ಭರವಸೆ ನೀಡಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಬಗ್ಗೆ ಲಭಿಸಿದ ದೂರಿನಂತೆ ಮಲಯಾಳಂ ಬಿಗ್ ಬಾಸ್ ನಟ ಶಿಯಾಝ್ ಕರೀಂ (34)ನನ್ನು ಕಾಸರಗೋಡು ಚಂದೇರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ವಿದೇಶ ದಿಂದ ಬಂದಿಳಿದ ಶಿಯಾಝ್ ನನ್ನು ಚೆನ್ನೈ ವಿಮಾನ ನಿಲ್ದಾಣದಿಂದ ಬಂಧಿಸಲಾಗಿದೆ. ಶಿಯಾಝ್ ವಿರುದ್ಧ ಲುಕ್ ಔಟ್ ನೋಟಿಸ್ ಬಿಡುಗಡೆಗೊಳಿಸಲಾಗಿತ್ತು. ಕಾಸರಗೋಡು ಪಡನ್ನದ 32 ರ ಹರೆಯದ ಯುವತಿ ನೀಡಿದ ದೂರಿನಂತೆ ಚಂದೇರ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದರು.

ಎರ್ನಾಕುಲಂ ನ ಜಿಮ್ ವೊಂದರಲ್ಲಿ ಕೆಲಸಕ್ಕಿದ್ದ ಯುವತಿಗೆ ವಿವಾಹ ವಾಗುವ ಭರವಸೆ ನೀಡಿರುವ ಶಿಯಾಝ್, 2021 ರಿಂದ 2023 ರ ತನಕ ಮೂರು ವರ್ಷ ಗಳಲ್ಲಿ ಎರ್ನಾಕುಲಂ, ಮುನ್ನಾರ್ ರೆಸಾರ್ಟ್ ಹಾಗೂ ಇನ್ನಿತರ ಕಡೆಗಳಿಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದಲ್ಲದೇ ಸುಮಾರು 11 ಲಕ್ಷ ರೂ.ಪಡೆದು ವಂಚಿಸಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಈ ಮಧ್ಯೆ ಬೇರೆ ಯುವತಿಯ ಜೊತೆ ವಿವಾಹ ನಿಶ್ಚಯ ಕುರಿತು ಶಿಯಾಝ್ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದು, ವಿವಾಹ ಭರವಸೆ ನೀಡಿ ತನ್ನನ್ನು ವಂಚಿಸಿರುವುದಾಗಿ ಆರೋಪಿಸಿ ಪೊಲೀಸರಿಗೆ ದೂರು ಲಭಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News