ಕಾಸರಗೋಡು | ಆಸ್ಪತ್ರೆ ಆವರಣದಲ್ಲಿ ಮಾದಕ ವಸ್ತು ಮಾರಾಟಕ್ಕೆ ಯತ್ನ: ಇಬ್ಬರ ಬಂಧನ

Update: 2023-10-09 10:21 GMT

ಕಾಸರಗೋಡು, ಅ.9: ನುಳ್ಳಿಪ್ಪಾಡಿಯ ಖಾಸಗಿ ಆಸ್ಪತ್ರೆಯ ಆವರಣದಲ್ಲಿ ಮಾದಕ ವಸ್ತು ಮಾರಾಟಕ್ಕೆ ಯತ್ನಿಸಿದ ಆರೋಪದಲ್ಲಿ ಇಬ್ಬರನ್ನು ಅಬಕಾರಿ ದಳದ ಸಿಬ್ಬಂದಿ ಬಂಧಿಸಿದ್ದಾರೆ.

ಉದುಮ ಎಡಚ್ಚಕೈ ನಿವಾಸಿ ಫೈಝಲ್ (37) ಮತ್ತು ತಳಿಪರಂಬ ನಿವಾಸಿ ಸಿ.ಟಿ.ಅಬ್ದುಲ್ಲ(46) ಬಂಧಿತ ಆರೋಪಿಗಳು. ರವಿವಾರ ಸಂಜೆ ನುಳ್ಳಿಪ್ಪಾಡಿಯ ಖಾಸಗಿ ಆಸ್ಪತ್ರೆಯ ಪಾರ್ಕಿಂಗ್ ಸ್ಥಳದಲ್ಲಿ ಗಾಂಜಾ ಹಸ್ತಾಂತರಿಸುತ್ತಿದ್ದಾಗ ಖಚಿತ ಮಾಹಿತಿಯಂತೆ ಹೊಂಚು ಹಾಕು ಕುಳಿತಿದ್ದ ಅಬಕಾರಿ ದಳದ ಸಿಬ್ಬಂದಿ ಆರೋಪಿಗಳನ್ನು ಸರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಇದರಿಂದ ಎಂಟು ಗ್ರಾಂ ಎಂಡಿಎಂಎ ಮಾದಕ ವಸ್ತು ಹಾಗೂ ಕಾರೊಂದನ್ನು ವಶಪಡಿಸಿಕೊಳ್ಳಲಾಗಿದೆ ಅಬಕಾರಿ ದಳದ ಸಿಬ್ಬಂದಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News