ಸಮಸ್ತ ಮದ್ರಸ ಮ್ಯಾನೇಜ್ ಮೆಂಟ್ ನ 'ಬಿ ಸ್ಮಾರ್ಟ್' ತರಬೇತಿ ಶಿಬಿರ ಸಮೋರೋಪ

Update: 2023-07-25 06:23 GMT

ಕಾಸರಗೋಡು : 'ಸಮಸ್ತ' ದ ಅಧೀನದ ಮದ್ರಸ ಮ್ಯಾನೇಜ್ ಮೆಂಟ್ ಅಸೋಸಿಯೇಷನ್ ವತಿಯಿಂದ ಎಲ್ಲಾ ಮದ್ರಸಗಳಲ್ಲೂ ನಡೆಸಲಾಗುವ 'ಬಿ ಸ್ಮಾರ್ಟ್ ಅಕಾಡಮಿ' ಯ ಪ್ರಯುಕ್ತ ತರಗತಿ ನಡೆಸಿಕೊಡುವವರಿಗಾಗಿ ಸಂಘಟಿಸಲಾದ ಕೇಂದ್ರೀಯ ಮಟ್ಟದ ತರಬೇತಿ ಶಿಬಿರವು ಕಾಸರಗೋಡು ತಳಂಗರದಲ್ಲಿ ಸಮಾರೋಪ ಗೊಂಡಿತು.

ದಕ್ಷಿಣ ಕನ್ನಡ, ಕೊಡಗು, ಕೇರಳದ ಕಣ್ಣೂರು, ಕಾಸರಗೋಡು ಜಿಲ್ಲೆಗಳ ಪ್ರತಿಯೊಂದು ರೇಂಜ್ ಗಳಿಂದ ಪ್ರತಿನಿಧಿಗಳಾಗಿ ತಲಾ ಒಬ್ಬರಂತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಳಂಗರ ದಖೀರತ್ ಯತೀಂ ಖಾನ ಆಡಿಟೋರಿಯಂ ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮದ್ರಸ ಮ್ಯಾನೇಜ್ ಮೆಂಟ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಫೀಕ್ ಹಾಜಿ ನೇರಳಕಟ್ಟೆ ಅಧ್ಯಕ್ಷತೆಯನ್ನು ವಹಿಸಿದ್ದರು‌.

ಕೇಂದ್ರೀಯ ಉಪಾಧ್ಯಕ್ಷ ಕೆ.ಪಿ.ಪಿ.ತಂಙಳ್ ಅಲ್ ಬುಖಾರಿ ಪಯ್ಯನ್ನೂರುಉದ್ಗಾಟಿಸಿದರು.

ಕಾರ್ಯದರ್ಶಿ ಮುಹಮ್ಮದ್ ಬಿನ್ ಆದಂ ಕಣ್ಣೂರು ಪ್ರಸ್ತಾವಿಕವಾಗಿ ಮಾತನಾಡಿದರು. ಕೇಂದ್ರೀಯ ಕಾರ್ಯದರ್ಶಿ ಶಾಹುಲ್ ಹಮೀದ್ ಮಾಸ್ಟರ್ ಮೇಲ್ ಮುರಿ ತರಬೇತಿ ಶಿಬಿರಕ್ಕೆ ನೇತೃತ್ವ ನೀಡಿದರು.

ಅಬ್ದುಲ್ ಮಜೀದ್ ಬಾಖವಿ ತಳಂಗರ ಪ್ರಾರ್ಥನೆ ನಡೆಸಿದರು. ಕಾಸರಗೋಡು ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ರಶೀದ್ ಬೆಳಿಂಜಂ ,ಹಾಶಿಂ ದಾರಿಮಿ ದೇಲಂಪಾಡಿ, ಬಶೀರ್ ಹಾಜಿ ಕೊಡಗು , ಎಂ.ಎಚ್.ಮೊಯ್ದೀನ್ ಹಾಜಿ ಅಡ್ಡೂರು, ಹುಸೈನ್ ಹಾಜಿ ತಳಂಗರ, ಅಬ್ದುಲ್‌ ಖಾದರ್ ಮಾಸ್ಟರ್ ತಳಂಗರ, ಅಶ್ರಫ್ ಅಸ್ನವಿ ಮರ್ದಳ, ಟಿ.ಎ.ಶಾಫಿ, ಮೊಯ್ದೀನ್ ಮಾಸ್ಟರ್ ಕಬಲ್ಲೂರು, ಗೋವ ಅಬ್ದುಲ್ಲಾ ಹಾಜಿ, ಎ.ಎ.ಸಿರಾಜುದ್ದೀನ್ , ವೆಲ್ ಕಂ ಮುಹಮ್ಮದ್ ಹಾಜಿ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News