ಸಾಂಸ್ಕೃತಿಕ ಉತ್ಸವ- ಸಿರಿಬಾಗಿಲು ಯಕ್ಷವೈಭವ ಸಮಾರೋಪ

Update: 2024-07-21 12:05 GMT

ಕಾಸರಗೋಡು: ಗಡಿನಾಡು ಕಾಸರಗೋಡಿನ ಸಿರಿಬಾಗಿಲಿನಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ನಡೆದ ನಾಲ್ಕು ದಿನಗಳ ಸಾಂಸ್ಕೃತಿಕ ಉತ್ಸವ 'ಸಿರಿಬಾಗಿಲು ಯಕ್ಷ ವೈಭವ' ಸಂಪನ್ನಗೊಂಡಿತು.

ಸಮರೋಪ ಸಮಾರಂಭ ಎಡನೀರು ಮಠಾಧೀಶರಾದ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಮತ್ತು ಉಪ್ಪಳ ಕೊಂಡೆಯೂರು ಮಠದ ಯೋಗಾನಂದ ಸರಸ್ವತಿ ಸ್ವಾಮೀಜಿ ಅವರ ಆಶೀರ್ವಚನದೊಂದಿಗೆ ಯಶಸ್ವಿಯಾಗಿ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಹಂಗಾರಕಟ್ಟೆ ಯಕ್ಷಗಾನ ಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರರವರು ವಹಿಸಿದರು. ಗಡಿನಾಡ ಸಂಗೀತ ವಿದ್ವಾಂಸೆಯಾದ ಶಕುಂತಲಾ ಕೆ. ಭಟ್ ಕುಂಚಿನಡ್ಕ ಇವರಿಗೆ 'ಸಿರಿಬಾಗಲು ವೆಂಕಪ್ಪಯ್ಯ ಪ್ರಶಸ್ತಿ' ನೀಡಿ ಗೌರವಿಸಲಾಯಿತು. ಪ್ರತಿಷ್ಠಾನಕ್ಕೆ ಹಲವು ವಿಧದಲ್ಲಿ ಸಹಕರಿಸಿದ ಇಂಜಿನಿಯರ್ ಶಿವಶಂಕರ ಜಿ.ಎನ್, ರಾಘವೇಂದ್ರ ಉಡುಪ, ಡಾ. ಸತ್ಯನಾರಾಯಣ, ಡಾ. ಶ್ರುತಕೀರ್ತಿ ರಾಜ್, ಮುಂತಾದವರನ್ನು ಗೌರವಿಸಲಾಯಿತು. ಮಂಡ್ಯ, ಬೆಂಗಳೂರಿನಿಂದ ಬಂದ ಕನ್ನಡ ಅಭಿಮಾನಿಗಳಾದ ಸುಲ್ತಾನ್ ಗೌಡ ಮತ್ತು ಷಣ್ಮುಖಮ್ ರವರು ಪ್ರತಿಷ್ಠಾನದ ಚಟುವಟಿಕೆಗಳನ್ನು ಗಮನಿಸಿ ಅಧ್ಯಕ್ಷರಾದ ರಾಮಕೃಷ್ಣ ಮಯ್ಯರನ್ನು ಗೌರವಿಸಿದರು.

ಪ್ರತಿಷ್ಠಾನ ಪ್ರಕಾಶಿಸಿದ ಏಳು ಕೃತಿಗಳ ಬಗ್ಗೆ ನಡೆದ ವಿಚಾರ ಸಂಕಿರಣದಲ್ಲಿ ರಾಧಾಕೃಷ್ಣ ಕಲ್ಚಾರ್ ವಿಟ್ಲ, ಡಾ. ನಾಗವೇಣಿ ಮಂಚಿ, ಉದಯವಾಣಿ ಪತ್ರಿಕೆಯ ಲಕ್ಷ್ಮೀ ಮಚ್ಚಿನ, ರಾಘವೇಂದ್ರ ಉಡುಪ ನೇರಳೆಕಟ್ಟೆ, ಕುಮಾರ ಸುಬ್ರಹ್ಮಣ್ಯ ಮುಳಿಯಾಲ, ಮುಂತಾದವರು ಭಾಗವಹಿಸಿದರು.

ಸಮಾರಂಭದಲ್ಲಿ ಡಾ. ಶ್ರುತಕೀರ್ತಿರಾಜ್ ಉಜಿರೆ ನಿರೂಪಿಸಿದರು. ಪ್ರಸನ್ನ ಕಾರಂತ ದೇಶಮಂಗಲ ಧನ್ಯವಾದವಿತ್ತರು. ಅತಿಥಿಗಳಾಗಿ ಮಾಂಡೋವಿ ಮೋಟಾರ್ಸ್ ನ ಮೆನೇಜರ್ ಶಶಿಧರ ಕಾರಂತ, ಕನ್ನಡ ಸಾಹಿತ್ಯ ಪರಿಷತ್ತು ಗಡಿನಾಡು ಘಟಕದ ಅಧ್ಯಕ್ಷರಾದ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತೋಡಿ, ಕರ್ನಾಟಕ ಬ್ಯಾಂಕ್ ಸಿಬ್ಬಂದಿ ಸುಜಿತ್, ಶೀನ ಶೆಟ್ಟಿ ಕಜೆ, ಸಿರಿಬಾಗಿಲು ವೆಂಕಪ್ಪಯ್ಯನವರ ಹಿರಿಯ ಪುತ್ರಿ ಮಂಗಳ ಗೌರಿ ಕುದ್ರೆಪ್ಪಾಡಿ ಉಪಸ್ಥಿತರಿದ್ದರು.

ನಾಲ್ಕು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹವ್ಯಾಸಿ ಯಕ್ಷಗಾನ ತಂಡಗಳಲ್ಲಿ 22 ತೆಂಕುತಿಟ್ಟಿನ ತಂಡಗಳು ಹಾಗೂ ಪ್ರಥಮವಾಗಿ ಮೂರು ಬಡಗುಟ್ಟಿನ ತಂಡಗಳು ಭಾಗವಹಿಸಿದ್ದವು.


Delete Edit


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News