ಎಡನೀರು ಮಠದಲ್ಲಿ ದೇರಾಜೆ ಸಂಸ್ಮರಣಾ ಗ್ರಂಥ, ಅಭಿನಂದನಾ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ

Update: 2023-11-20 06:23 GMT

ಕಾಸರಗೋಡು: ದೇರಾಜೆ ಸೀತಾರಾಮಯ್ಯ ಸಂಸ್ಮರಣಾ ಸಮಿತಿಯ ನೇತೃತ್ವದಲ್ಲಿ ಸಿದ್ಧಗೊಂಡ 'ದೇರಾಜೆ ಸೀತಾರಾಮಯ್ಯ ನೆನಪು ನೂರೆಂಟು' ಎಂಬ ಸಂಸ್ಮರಣಾ ಗ್ರಂಥದ ಲೋಕಾರ್ಪಣೆ ಕಾಸರಗೋಡಿನ ಎಡನೀರು ಮಠದ ಆಶ್ರಯದಲ್ಲಿ ಮತ್ತು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಟಾನದ ಸಹಯೋಗದಲ್ಲಿ ನವೆಂಬರ್ 14 ಮಂಗಳವಾರದಂದು ಎಡನೀರು ಮಠದಲ್ಲಿ ನಡೆಯಿತು.

ದ್ವಿತೀಯ ಮುದ್ರಣ ಕಂಡ 'ರಸಋಷಿ' ಎನ್ನುವ ದೇರಾಜೆ ಅಭಿನಂದನಾ ಗ್ರಂಥದ ಬಿಡುಗಡೆಯೂ ಇದೇ ಸಂದರ್ಭದಲ್ಲಿ ಎಡನೀರು ಮಠಾಧೀಶರಾದ ಸಚ್ಚಿದಾನಂದ ಭಾರತೀ ಶ್ರೀಗಳು ನೆರವೇರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಡಾ.ಟಿ.ಶ್ಯಾಮ ಭಟ್ ರವರು ವಹಿಸಿಕೊಂಡಿದ್ದರು. ಎಡನೀರು ಮಠಾಧೀಶರು ಅನುಗ್ರಹ ಸಂದೇಶ ನೀಡಿದರು.


ಉಡ್ವೇಕೋಡಿ ಸುಬ್ಬಪ್ಪಯ್ಯ ಸಂಸ್ಮರಣಾ ಭಾಷಣ ಮಾಡಿದರು. ಗ್ರಂಥದ ಕುರಿತಾಗಿ ಸಮಿತಿಯ ಸೇರಾಜೆ ಗೋಪಾಲಕೃಷ್ಣ ಭಟ್ ಮತ್ತು ಶ್ರೀಕರ ಭಟ್ ಮರಾಟೆ ಮಾತಾಡಿದರು.

ಗ್ರಂಥ ರಚನಾ ಕಾರ್ಯದಲ್ಲಿ ಸಹಕರಿಸಿದ ಜಯರಾಮ ಅಳಿಕೆ, ಕೊಕ್ಕಡ ವೆಂಕಟರಮಣ ಭಟ್ ಇವರನ್ನು ಸನ್ಮಾನಿಸಲಾಯಿತು.

ಕಲಾವಿದ ಹರೀಶ ಬಳಂತಿಮೊಗರು ಕಾರ್ಯಕ್ರಮ ನಿರೂಪಿಸಿದರು.  ರಾಧಾಕೃಷ್ಣ ಕಲ್ಚಾರ್ ಸ್ವಾಗತಿಸಿದರು. ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಟಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಅವರು ವಂದಿಸಿದರು. ಕುಮಾರಿ ನಿಹಾರಿಕ ದೇರಾಜೆ ಪ್ರಾರ್ಥಿನೆ ಸಲ್ಲಿಸಿದರು.


ಸಭಾ ಕಾರ್ಯಕ್ರಮದ ಬಳಿಕ ಶ್ರೀ ದಿವಾಕರ ಹೆಗಡೆ ಅವರಿಂದ 'ಸೀತಾಂತರಂಗ' ಎಂಬ ಏಕವ್ಯಕ್ತಿ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ವಿದ್ವಾನ್ ಗಣಪತಿ ಭಟ್ ಮತ್ತು ಮದ್ದಳೆಯಲ್ಲಿ ಎ.ಪಿ. ಪಾಠಕ್ ಸಹಕರಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News