ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ಉಚಿತ ವೈದ್ಯಕೀಯ ಶಿಬಿರ ಉದ್ಘಾಟಿಸಿದ ಡಾ.ಬಿ.ಯಸ್. ರಾವ್
ಕಾಸರಗೋಡು: ಕೆ.ಯಂ.ಸಿ.ಹಾಸ್ಪಿಟಲ್ ಅತ್ತಾವರ ಮಂಗಳೂರು ಇವರ ನೇತೃತ್ವದಲ್ಲಿ ಸಾಂಸ್ಕೃತಿಕ ಕ್ಷೇತ್ರದ ಜನಪ್ರಿಯ ಸಂಸ್ಥೆಯಾದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ಉಚಿತ ವೈದ್ಯಕೀಯ ತಪಾಸಣೆ ನಡೆಯಿತು.
ಗಡಿನಾಡು ಕಾಸರಗೋಡಿನ ಹಿರಿಯ ವೈದ್ಯ ಡಾ. ಬಿ.ಯಸ್. ರಾವ್ ಅವರು ದೀಪಬೆಳಗಿಸಿ ಉದ್ಘಾಟಿಸಿ ಗ್ರಾಮೀಣ ಪ್ರದೇಶದ ಜನರಲ್ಲಿ ಆರೋಗ್ಯ ದ ಬಗ್ಗೆ ಜಾಗೃತಿ ಮೂಡಿಸುವ ಶಿಬಿರ ನಡೆಸುತ್ತಿರುವ ಕೆ.ಯಂ.ಸಿ.ಯವರ ಕಾರ್ಯ ಸ್ತುತ್ಯರ್ಹ ಎಂದು ಶ್ಲಾಘಿಸಿದರು.
ಸಾಂಸ್ಕೃತಿಕ ವಾಗಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ ಪ್ರತಿಷ್ಠಾನ ತನ್ನ ಸಾಂಸ್ಕೃತಿಕ ಕ್ಷೇತ್ರದ ಹೊರತಾದ ಚಟುವಟಿಕೆ ಮೆಚ್ಚುವಂತಹದು. ಈ ಹಿಂದೆ ಕೊವಿಡ್ ಸಮಯದಲ್ಲೂ ಪ್ರತಿಷ್ಠಾನವು ಕೊರೋನಾ ಯಕ್ಷಗಾನದ ಮೂಲಕ ಸಮಾಜಕ್ಕೆ ಜಾಗೃತಿ ಮೂಡಿಸಿ ವಿಶ್ವ ಆರೋಗ್ಯ ಸಂಸ್ಥೆಯ ಮೆಚ್ಚುಗೆಗೆ ಪಾತ್ರರಾದುದನ್ನು ನೆನಪಿಸಿದರು.
ಕೆ.ಯಂ.ಸಿ.ಯ ಕ್ಯಾನ್ಸರ್ ತಜ್ಞ ವ್ಯೆದ್ಯರಾದ ಡಾ.ಅಭಿಷೇಕ್ ಕೃಷ್ಣ ಅವರು ಕ್ಯಾನ್ಸರ್ ಕುರಿತಾದ ಮಾಹಿತಿ ನೀಡಿದರು. ನಾಗರಿಕರು ದುಶ್ಟಟ ದಿಂದ ಮುಕ್ತರಾಗಿ , ಹಿತ ಮಿತವಾದ ಆಹಾರ ಸೇವನೆ ಯಿಂದ ಆರೋಗ್ಯ ವಂತರಾಗಿರಿ. ಕ್ಯಾನ್ಸರ್ ರೋಗಿಗಳು ಭಯ ಪಡ ಬೇಕಾಗಿಲ್ಲ. ಈಗ ರೋಗ ಲಕ್ಷಣಗಳು ಯಾವ ಹಂತದಲ್ಲಿದ್ದರೂ ಈಗ ಗುಣಪಡಿಸಬಹುದು ಎಂದರು.
ಕೆ.ಯಂ. ಸಿ.ಯ ಶಿಬಿರದ ಸಂಘಟಕ ಉದಯ ಭಟ್, ಈ ಹಿಂದೆ ನಡೆಸಿದ ಹಲವು ಶಿಬಿರ,ಅದರಿಂದ ನಾಗರಿಕರಿಗಾದ ಪ್ರಯೋಜನಗಳು ವಿವರಿಸಿದರು.
ಮಣಿಪಾಲ ಕೆ.ಯಂ. ಸಿ.ಯ ನೇತ್ರ ತಜ್ಞೆ ಡಾ.ಶೈಲಜಾ, ಮಂಗಳೂರಿನ ಡಾ. ನಾರಾಯಣ ಮಧೂರು. ಡಾ.ರಾಜಾರಾಮ ದೇವಕಾನ, ಶಿವನಾರಾಯಣ ಗೆಳೆಯರ ವಾಟ್ಸಾಪ್ ಬಳಗದ ಅಧ್ಯಕ್ಷರಾದ ಶ್ರೀ ವಾಸುದೇವ ಕಾರಂತ ಉಪಸ್ಥತರಿದ್ದರು.
ಶಿವನಾರಾಯಣ ಗೆಳೆಯರ ವಾಟ್ಸಾಪ್ ಬಳಗದ ವತಿಯಿಂದ ಸಿರಿಬಾಗಿಲು ಪ್ರತಿಷ್ಠಾನಕ್ಕೆ ಬೃಹತ್ ಮೊತ್ತದ ಪಾತ್ರೆ ಸಾಮಗ್ರಿಗಳನ್ನು ಬಳಗದ ಸದಸ್ಯರು ಜತೆ ಗೂಡಿ ಡಾ.ಬಿ.ಯಸ್. ರಾವ್ ಮುಖಾಂತರ ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸಿರಿಬಾಗಿಲು ಇವರಿಗೆ ಹಸ್ತಾಂತರಿಸಿದರು. ರಾಮಕೃಷ್ಣ ಮಯ್ಯ ಅವರು ಅತಿಥಿಗಳನ್ನು ಸ್ವಾಗತಿಸಿದರು. ಶ್ರೀ ಜಗದೀಶ ಕೆ.ಕೂಡ್ಲು ಇವರು ನಿರೂಪಿಸಿ, ಶ್ರೀ ಮೋಹನ್ ಕುಮಾರ್ ಶೆಟ್ಟಿ ಸಿರಿಬಾಗಿಲು ವಂದಿಸಿದರು. ಆ ಬಳಿಕ ಪ್ರಸಿದ್ದ ವೈದ್ಯರುಗಳಿಂದ 335 ಕ್ಕೂ ಹೆಚ್ಚು ನಾಗರಿಕರಿಗೆ ಉಚಿತ ವೈದ್ಯಕೀಯ ತಪಾಸಣೆ ನಡೆಸಲಾಯಿತು. ಸಿರಿಬಾಗಿಲು ಪ್ರತಿಷ್ಠಾನದ ವತಿಯಿಂದ ಉಚಿತ ಕನ್ನಡಕ ಹಾಗು ಔಷದಗಳನ್ನು ನೀಡಲಾಯಿತು.