ಜುಲೈ 7ರಂದು ಶಾಲೆ, ಕಾಲೇಜುಗಳಿಗೆ ರಜೆ: ಕಾಸರಗೋಡು ಜಿಲ್ಲಾಧಿಕಾರಿ
Update: 2023-07-06 15:38 GMT
ಕಾಸರಗೋಡು : ಜಿಲ್ಲೆಯಲ್ಲಿ ಜುಲೈ 7 ರಂದು ರೆಡ್ ಅಲರ್ಟ್ ಘೋಷಿಸಿರುವುದರಿಂದ ವೃತ್ತಿಪರ ಕಾಲೇಜು ಸೇರಿದಂತೆ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಿ ಕಾಸರಗೋಡು ಜಿಲ್ಲಾಧಿಕಾರಿ ಕೆ.ಇಂಪಾ ಶೇಖರ್ ಆದೇಶ ಹೊರಡಿಸಿದ್ದಾರೆ.
ಪೂರ್ವ ನಿಗದಿತ ಪರೀಕ್ಷೆಗಳಿಗೆ ಬದಲಾವಣೆ ಇಲ್ಲ. ಶಾಲಾ ಆವರಣದೊಳಗೆ ಅಪಾಯಕಾರಿಯಾಗಿರುವ ಮರಗಳು, ಆವರಣ ಗೋಡೆ, ಹಳೆಯ ಶೌಚಾಲಯ ಹೊಂಡಗಳು, ಹಳೆ ಕಟ್ಟಡ ಮೊದಲಾದವುಗಳ ಬಗ್ಗೆ ಶಾಲಾ ರಕ್ಷಕ ಶಿಕ್ಷಕ ಸಂಘ, ಶಿಕ್ಷಕರು ಜು.7 ರಂದು ಪರಿಶೀಲಿಸಿ ಮಕ್ಕಳ ಸುರಕ್ಷತೆ ಬಗ್ಗೆ ಖಾತರಿಪಡಿಸುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.