ಕಾಸರಗೋಡು| ಕಾರು ಪಲ್ಟಿ: ಇಂಜಿನಿಯರಿಂಗ್ ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು; ಮೂವರಿಗೆ ಗಾಯ

Update: 2024-08-17 11:55 GMT

 ಆರಿಬುದ್ದೀನ್

ಕಾಸರಗೋಡು: ನಿಯಂತ್ರಣ ತಪ್ಪಿದ ಕಾರು ಮಗುಚಿ ಬಿದ್ದ ಪರಿಣಾಮ ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟು, ಮೂವರು ಗಾಯಗೊಂಡ ಘಟನೆ ರಾಣಿಪುರ ಸಮೀಪದ ಪೆರುತ್ತಡಿ ಎಂಬಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.

ಸುರತ್ಕಲ್ ಎನ್ ಐ ಟಿ ಕೆ ಯ ವಿದ್ಯಾರ್ಥಿ ರಾಯಚೂರು ನಿವಾಸಿ ಆರಿಬುದ್ದೀನ್ (21) ಮೃತರು. ಗಾಯಗೊಂಡವರನ್ನು ಪೂಡಂಕಲ್ ನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರಿನಲ್ಲಿ ನಾಲ್ವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಪ್ರವಾಸಿ ಕೇಂದ್ರವಾದ ರಾಣಿಪುರಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಚರಂಡಿಗೆ ಬಿದ್ದು ಧರೆಗೆ ಬಡಿದಿದೆ.

ರಾಜಾಪುರ ಠಾಣೆ ಪೊಲೀಸರು ಅಪಘಾತಕ್ಕೀಡಾದ ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News