ಕಾಸರಗೋಡು: ಮಹಿಳೆಯ ಮೃತದೇಹ ಬಾವಿಯಲ್ಲಿ ಪತ್ತೆ

Update: 2024-08-20 12:46 GMT

ಕಾಸರಗೋಡು: ಮಹಿಳೆಯೋರ್ವರ ಮೃತದೇಹ ಬಾವಿಯಲ್ಲಿ ಪತ್ತೆಯ ಘಟನೆ ನಗರ ಹೊರವಲಯದ ಹಳೆ ಸೂರ್ಲುವಿನ ಬಟ್ಟಂಪಾರೆಯಲ್ಲಿ ಸೋಮವಾರ ರಾತ್ರಿ ನಡೆದಿದೆ.

ಬಟ್ಟಂಪಾರೆಯ ಎಸ್ . ಶಿವ ಎಂಬವರ ಪತ್ನಿ ಶರ್ಮಿಳಾ (44) ಮೃತಪಟ್ಟವರು. ರಾತ್ರಿ ಸುಮಾರು 11.30ರ ಬಳಿಕ ಇವರು ಮನೆಯಿಂದ ನಾಪತ್ತೆಯಾಗಿದ್ದರು. ಇದರಿಂದ ಮನೆಯವರು ಶೋಧ ನಡೆಸಿದ್ದರು. ಈ ನಡುವೆ ತಡರಾತ್ರಿ ಮನೆ ಸಮೀಪದ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ. ಕಾಸರಗೋಡಿನಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಮೃತ ದೇಹವನ್ನು ಮೇಲಕ್ಕೆತ್ತಿದ್ದಾರೆ.

ಶರ್ಮಿಳಾರ ಪತಿ ಶಿವ ಅಮೈ ಬಳಿ ಅಕೌಂಟೆಂಟ್ ಕಚೇರಿ ನಡೆಸುತ್ತಿದ್ದು ಇದೇ ಕಚೇರಿಯಲ್ಲಿ ಶರ್ಮಿಳಾ ಕೂಡಾ ಅಕೌಂಟೆಂಟ್ ಆಗಿ ದುಡಿಯುತ್ತಿದ್ದರು. ಕಾಸರಗೋಡು ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News