ಕಾಸರಗೋಡು: ಸಾಹಿತಿ ಇಬ್ರಾಹಿಂ ಬೇವಿಂಜ ನಿಧನ

Update: 2023-08-04 04:03 GMT

ಕಾಸರಗೋಡು: ಕೆಲವು ದಿನಗಳಿಂದ ಅನಾರೋಗ್ಯಕ್ಕೀಡಾಗಿ ಚಿಕಿತ್ಸೆ ಪಡೆಯುತ್ತಿದ್ದ ಕಾಸರಗೋಡು ಚೆರ್ಕಳ ಬೇವಿಂಜ ನಿವಾಸಿಯಾದ ಸಾಹಿತಿ, ಅಧ್ಯಾಪಕ ಇಬ್ರಾಹೀಂ ಬೇವಿಂಜ (69) ನಿಧನರಾಗಿದ್ದಾರೆ.

ಕಾಸರಗೋಡು ಸರ್ಕಾರಿ ಕಾಲೇಜಿನಿಂದ ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯದಲ್ಲಿ ಪದವಿ ಪಡೆದ ಇಬ್ರಾಹೀಂ ಅವರು, ಬಳಿಕ ಪಟ್ಟಾಂಬಿ ಸಂಸ್ಕೃತ ಕಾಲೇಜಿನಲ್ಲಿ ಮಲಯಾಳಂನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು.

ಕೋಝಿಕ್ಕೋಡ್ ವಿಶ್ವವಿದ್ಯಾಲಯದಲ್ಲಿ ಎಂಫಿಲ್ ಪೂರ್ತಿಗೊಳಿಸಿದ ಅವರು, 1980-81ರ ಅವಧಿಯಲ್ಲಿ ಚಂದ್ರಿಕಾ ದಿನಪತ್ರಿಕೆಯ ಸಹ ಸಂಪಾದಕರಾಗಿದ್ದರು.

1981 ರಿಂದ ಕಾಸರಗೋಡು ಸರ್ಕಾರಿ ಕಾಲೇಜು, ಕಣ್ಣೂರು ಮಹಿಳಾ ಕಾಲೇಜು ಮತ್ತು ಮಂಜೇಶ್ವರಂ ಗೋವಿಂದಪೈ ಸ್ಮಾರಕ ಸರ್ಕಾರಿ ಕಾಲೇಜುಗಳಲ್ಲಿ ಮಲಯಾಳಂ ಅಧ್ಯಾಪಕರಾಗಿಯೂ ಸೇವೆ ಸಲ್ಲಿಸಿ, 2010ರಲ್ಲಿ ನಿವೃತ್ತರಾದರು.

ಕೇರಳ ಸಾಹಿತ್ಯ ಅಕಾಡೆಮಿಯ ಸದಸ್ಯ, ಸಮಸ್ತ ಕೇರಳ ಸಾಹಿತ್ಯ ಪರಿಷತ್ತಿನ ಸದಸ್ಯ, ಕಲ್ಲಿಕೋಟೆ ವಿಶ್ವವಿದ್ಯಾಲಯದಲ್ಲಿ ಯುಜಿ ಬೋರ್ಡ್ ಆಫ್ ಸ್ಟಡೀಸ್ ಮತ್ತು ಪಿಜಿ ಬೋರ್ಡ್ ಆಫ್ ಸ್ಟಡೀಸ್‌ನ ಸದಸ್ಯರಾಗಿದ್ದರು.

ಹಲವಾರು ಮಲಯಾಳಂ ಕೃತಿಗಳನ್ನು ಬರೆದ ಅವರು, ಕುರ್ ಆನ್ ಸೌಂದರ್ಯ ಶಾಸ್ತ್ರದ ಬಗ್ಗೆ ಸಂಶೋಧನೆ ನಡೆಸಿದ್ದರು. ಮಲಯಾಳಂ ಸಾಹಿತ್ಯದಲ್ಲಿ ಜಾತ್ಯತೀತತೆ ಬಗೆಗಿನ ಅವರ ಅಧ್ಯಯನ ಪೂರ್ಣಗೊಂಡಿದೆ.

ಇಬ್ರಾಹೀಂ ಅವರು ಬೇವಿಂಜ ಅಬ್ದುಲ್ಲಾ ಕುಂಞಿ ಮುಸ್ಲಿಯಾರ್ ಮತ್ತು ಚೆಂಬರಿಕ ಉಮ್ಮಾಲಿಮ್ಮ ದಂಪತಿಯ ಪುತ್ರ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News