ಕಾಸರಗೋಡು: ತಾಯಿಯ ಕೊಲೆ; ಆರೋಪಿ ಮಗನ ಬಂಧನ

Update: 2024-09-17 12:46 GMT

ಕಾಸರಗೋಡು: ತಾಯಿಯ ತಲೆಗೆ ಹೊಡೆದು ಮಗ ಕೊಲೆಗೈದಿದ್ದಾನೆ ಎನ್ನಲಾದ ಘಟನೆ ಆದೂರು ಠಾಣೆ ವ್ಯಾಪ್ತಿಯ ಪೊವ್ವಲ್ ನಲ್ಲಿ ಇಂದು ಸಂಜೆ ನಡೆದಿದೆ .

ಪೊವ್ವಲ್ ಪೆಟ್ರೋಲ್ ಬಂಕ್ ಸಮೀಪದ ಅಬ್ದುಲ್ಲ ಕುಂಞಿ ಅವರ ಪತ್ನಿ ನಬೀಸಾ (62) ಕೊಲೆಯಾದ ಮಹಿಳೆ.

ಈ ವೇಳೆ ಹಲ್ಲೆ ತಡೆಯಲೆತ್ನಿಸಿದ ಸಹೋದರ ಮಜೀದ್ ಗಾಯಗೊಂಡಿದ್ದಾರೆ. ಕೃತ್ಯಕ್ಕೆ ಸಂಬಂಧಪಟ್ಟಂತೆ ಅವರ ಪುತ್ರ ಸಾಜಿದ್ ನನ್ನು ಆದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News