ಕಾಸರಗೋಡು: ಬೋಟ್ ದುರಂತಕ್ಕೀಡಾಗಿ ಓರ್ವ ಮೃತ್ಯು; ಓರ್ವ ನಾಪತ್ತೆ

Update: 2024-10-16 12:43 GMT

ಸಾಂದರ್ಭಿಕ ಚಿತ್ರ

ಕಾಸರಗೋಡು: ಸಮುದ್ರದಲ್ಲಿ ಮೀನುಗಾರಿಕಾ ಫೈಬರ್ ಬೋಟ್ ದುರಂತಕ್ಕೀಡಾಗಿ ಓರ್ವ ಮೃತಪಟ್ಟು, ಓರ್ವ ನಾಪತ್ತೆಯಾಗಿದ್ದು, 35 ಮಂದಿಯನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ.

ವಳಿಯಪರಂಬ ಕಡೆಯಿಂದ ಬರುತ್ತಿದ್ದ ಬೋಟ್ ದುರಂತಕ್ಕೆ ಸಿಲುಕಿದೆ. ಪ್ರಾಥಮಿಕ ಮಾಹಿತಿಯಂತೆ ಬೋಟ್ ನಲ್ಲಿ 37 ಮಂದಿ ಇದ್ದರು ಎನ್ನಲಾಗಿದೆ. ಕೇರಳ, ಒಡಿಸ್ಸಾ ನಿವಾಸಿಗಳಾದ ಬೆಸ್ತರು ಈ ಬೋಟ್ ನಲ್ಲಿದ್ದರು. ರಕ್ಷಿಸಿದವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News