ಕಾಸರಗೋಡು: ಮಗುಚಿ ಬಿದ್ದ ಬೋರ್ ವೆಲ್ ಯಂತ್ರ ಸಾಗಾಟದ ಲಾರಿ; ಮೂವರಿಗೆ ಗಾಯ

Update: 2023-08-10 10:42 GMT

ಕಾಸರಗೋಡು: ಬೋರ್ ವೆಲ್ ಯಂತ್ರ ಸಾಗಾಟದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಘಟನೆ ಕಳ್ಳಾರ್ ಬಳಿ ಗುರುವಾರ ಮಧ್ಯಾಹ್ನ ನಡೆದಿರುವ ಬಗ್ಗೆ  ವರದಿಯಾಗಿದೆ.

ಚಾಲಕ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ. ಇವರನ್ನು ಸಮೀಪದ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ

ಎಂದು ತಿಳಿದು ಬಂದಿದೆ. ಪಾಣತ್ತೂರು ಕಡೆಗೆ ತೆರಳುತ್ತಿದ್ದ ಲಾರಿ ಇಳಿಜಾರು ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಈ ಅವಘಡ ನಡೆದಿದ್ದು, ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ತಲುಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News