ಕಾಸರಗೋಡು: ಪ್ಲೈವುಡ್ ಫ್ಯಾಕ್ಟರಿಯ ಸ್ಲ್ಯಾಬ್ ಕುಸಿದು ಮೇಲ್ವಿಚಾರಕ ಮೃತ್ಯು

Update: 2023-08-07 12:06 GMT

ಕಾಸರಗೋಡು : ಪ್ಲೈವುಡ್ ಫ್ಯಾಕ್ಟರಿಯ ಸ್ಲ್ಯಾಬ್ ಕುಸಿದು ಬಿದ್ದ ಪರಿಣಾಮ ಮೇಲ್ವಿಚಾರಕ ಮೃತಪಟ್ಟ ಘಟನೆ ಕುಂಬಳೆ ಸಮೀಪದ ಅನಂತಪುರದಲ್ಲಿ ಇಂದು ಮಧ್ಯಾಹ್ನ ನಡೆದಿದೆ.

ಪಯ್ಯನ್ನೂರ್ ಕೇಲೊತ್ ನಿವಾಸಿ ರೌಫ್ (60) ಮೃತಪಟ್ಟವರು.

ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಫ್ಯಾಕ್ಟರಿಯ ನವೀಕರಣ ಕಾಮಗಾರಿ ನಡೆಯುತ್ತಿದ್ದು, ಇದರಂತೆ ನಿರ್ಮಿಸಲಾದ ಸ್ಲ್ಯಾಬ್ ಕುಸಿದು ಬಿದ್ದು‌ ದುರ್ಘಟನೆ ನಡೆದಿದೆ. ಸ್ಲ್ಯಾಬ್‌ನಡಿಗೆ ಬಿದ್ದ ರೌಫ್ ರನ್ನು ಹೊರತೆಗೆದು ಆಸ್ಪತ್ರೆಗೆ ತಲಪಿಸಿದರೂ ಆಗಲೇ ಮೃತಪಟ್ಟಿದ್ದರು. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.

ಕುಂಬಳೆ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News