ಕಾಸರಗೋಡು: ರಸ್ತೆಯ ಹೊಂಡದಲ್ಲಿ ಮಗುಚಿ ಬಿದ್ದ ಸ್ಕೂಟರ್; ಎಂಬಿಬಿಎಸ್ ವಿದ್ಯಾರ್ಥಿನಿ ಮೃತ್ಯು

Update: 2023-09-18 16:37 GMT

ಶಿವಾನಿ ಬಾಳಿಗಾ

ಕಾಸರಗೋಡು: ರಸ್ತೆಯ ಹೊಂಡದಲ್ಲಿ ಸಿಲುಕಿದ ಸ್ಕೂಟರ್ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಪರಿಣಾಮ ಎಂಬಿಬಿಎಸ್ ವಿದ್ಯಾರ್ಥಿನಿ ಮೃತಪಟ್ಟ ಘಟನೆ ಕಾಸರಗೋಡಿನಲ್ಲಿ ನಡೆದಿದೆ.

ಕಣ್ಣೂರು ಚೇಂಬರ್ ಆಫ್ ಕಾಮರ್ಸ್ ನ ಮಾಜಿ ಅಧ್ಯಕ್ಷ, ಕಣ್ಣೂರು ಸೈಂಟ್ ಮೈಕಲ್ ಶಾಲಾ ಸಮೀಪದ ಮಹೇಶ್ಚಂದ್ರ ಬಾಳಿಗಾ ಅವರ ಪುತ್ರಿ ಶಿವಾನಿ ಬಾಳಿಗಾ (20) ಮೃತಪಟ್ಟ ಎಂಬಿಬಿಎಸ್ ವಿದ್ಯಾರ್ಥಿನಿ. ಈಕೆ ಮಣಿಪಾಲ ವಿಶ್ವವಿದ್ಯಾನಿಲಯದ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿದ್ದರು.

ರವಿವಾರ ರಾತ್ರಿ ಕಾಸರಗೋಡು ಚಂದ್ರಗಿರಿ ರಸ್ತೆಯ ಪಿಲಿಕುಂಜೆ ಎಂಬಲ್ಲಿ ಅಪಘಾತ ನಡೆದಿತ್ತು. ಸ್ಕೂಟರ್ ನಲ್ಲಿ ತೆರಳುತ್ತಿ ದ್ದಾಗ ರಸ್ತೆಯ ಹೊಂಡಕ್ಕೆ ಬಿದ್ದ ಪರಿಣಾಮ ರಸ್ತೆಗೆಸೆಯಲ್ಪಟ್ಟ ಶಿವಾನಿ ಗಂಭೀರ ಗಾಯಾಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಸಂಜೆ ಮೃತಪಟ್ಟಿದ್ದಾರೆ.

ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News