ಕಾಸರಗೋಡು: ಸಿಪಿಎಂ ಹಿರಿಯ ಮುಖಂಡ ಕೆ. ಕುಂಞಿರಾಮನ್ ನಿಧನ

Update: 2023-12-14 04:32 GMT

ಕಾಸರಗೋಡು : ಮಾಜಿ ಶಾಸಕ ಹಾಗೂ ಸಿಪಿಎಂ ಹಿರಿಯ ಮುಖಂಡ ಕೆ. ಕುಂಞಿರಾಮನ್ (80) ಬುಧವಾರ ರಾತ್ರಿ ಸ್ವ ಗೃಹ ದಲ್ಲಿ ನಿಧನರಾದರು.

2006 ರಿಂದ 2016 ರ ತನಕ ತ್ರಿಕ್ಕರಿಪುರ ಶಾಸಕರಾಗಿದ್ದ ಇವರು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಆಗಿಯೂ ಸೇವೆ ಸಲ್ಲಿಸಿದ್ದರು. 1994 ರಿಂದ 2004 ರ ತನಕ ಸಿಪಿಎಂ ಜಿಲ್ಲಾ ಕಾರ್ಯದರ್ಶಿ, ರಾಜ್ಯ ಸಮಿತಿ ಸದಸ್ಯ ರಾಗಿದ್ದರು.

1979 ರಿಂದ 84 ರ ತನಕ ಚೆರ್ವತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ರಾಗಿದ್ದ ಇವರು ಪ್ರಸ್ತುತ ಸಿಪಿಐಎಂ ಚರ್ವ ತ್ತೂರು ವಲಯ ಕಾರ್ಯದರ್ಶಿ ಯಾಗಿದ್ದರು.

ಮೃತರು ಪತ್ನಿ, ಐವರು ಮಕ್ಕಳು ಹಾಗೂ ಅಪಾರ ಬಂಧುಗವನ್ನು ಅಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News