ಕಾಸರಗೋಡು: ರೈಲು ಹಳಿಯಲ್ಲಿ ಕಲ್ಲು, ತುಂಡಾದ ಕ್ಲೋಸೆಟ್ ಪತ್ತೆ; ತಪ್ಪಿದ ಅಪಾಯ

Update: 2023-08-17 12:50 GMT

ಕಾಸರಗೋಡು : ರೈಲು ಹಳಿಯಲ್ಲಿ ಕಲ್ಲು ಹಾಗೂ ತುಂಡಾದ ಕ್ಲೋಸೆಟ್ ಪತ್ತೆಯಾದ ಘಟನೆ ಕಾಸರಗೋಡಿನ ಕೋಟಿಕುಲಂ ಎಂಬಲ್ಲಿ ಇಂದು ಮಧ್ಯಾಹ್ನ ಬೆಳಕಿಗೆ ಬಂದಿದ್ದು, ಇದರಿಂದ ಭಾರೀ ಅಪಾಯ ತಪ್ಪಿದೆ.

ಕೋಟಿಕುಲಂನ ಚೆಂಬರಿಕ ಸುರಂಗ ಸಮೀಪ ಈ ಘಟನೆ ನಡೆದಿದೆ.

ಕಾಸರಗೋಡಿನಿಂದ ಹೊರಟ ಕೊಯಮುತ್ತೂರು - ಮಂಗಳೂರು ಇಂಟರ್ ಸಿಟಿ ಎಕ್ಸ್ ಪ್ರೆಸ್ ರೈಲಿನ ಲೋಕೊ ಪೈಲಟ್ ಇದನ್ನು ಗಮನಿಸಿದ್ದು, ರೈಲು ಹಾದು ಹೋಗುವ ಸಂದರ್ಭ ಏನೋ ಬಡಿದ ಶಬ್ದ ಕೇಳಿದ್ದು, ಇದರಿಂದ ಕಾಸರಗೋಡು ರೈಲ್ವೆ ಅಧಿಕಾರಿಗೆ ಮಾಹಿತಿ ನೀಡಿದ್ದರು.

ರೈಲ್ವೆ ಪೊಲೀಸರು ಹಾಗೂ ರೈಲ್ವೆ ಭದ್ರತಾ ಪಡೆ ಸ್ಥಳಕ್ಕೆ ಬಂದು ತಪಾಸಣೆ ನಡೆಸಿದಾಗ ಹಳಿಯಲ್ಲಿ ಕಲ್ಲು ಹಾಗೂ ತುಂಡಾದ ಕ್ಲೋಸೆಟ್ ಪತ್ತೆಯಾಗಿದೆ .

ಈ ಬಗ್ಗೆ ತನಿಖೆ ಆರಂಭಿಸಲಾಗಿದೆ. ಸಮೀಪದ ಸಿಸಿಟಿವಿ ಕ್ಯಾಮರ ದೃಶ್ಯಗಳನ್ನು ಕಲೆ ಹಾಕಲಾಗುತ್ತಿದೆ. ಕಣ್ಣೂರು - ಕಾಸರಗೋಡು ನಡುವೆ ಕೆಲ ದಿನಗಳಿಂದ ರೈಲುಗಳ ಮೇಲೆ ಕಲ್ಲೆಸೆದ ಘಟನೆಗಳು ನಡೆದಿದ್ದು, ಇದರ ಬಳಿಕ ಇದೀಗ ರೈಲು ಹಳಿಯಲ್ಲಿ ನಡೆದಿರುವ ಇಂತಹ ಕೃತ್ಯಗಳು ಸಂಶಯಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News