ಕಾಸರಗೋಡು: ಗಾಂಜಾ ಸಹಿತ ಇಬ್ಬರ ಬಂಧನ

Update: 2023-11-02 06:10 GMT

ಕಾಸರಗೋಡು: ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಒಂದು ಕಿಲೋ ಗಾಂಜಾ ಸಹಿತ ಇಬ್ಬರನ್ನು ಅಬಕಾರಿ ದಳದ ಸಿಬ್ಬಂದಿಗಳು ಬಂಧಿಸಿದ್ದಾರೆ.

ಬಂಧಿತರನ್ನು ಸೀತಾಂಗೋಳಿ ನಿವಾಸಿಗಳಾದ ಹನೀಫ್. ಬಿ (40) ಮತ್ತು ಫೈಝಲ್ (38) ಎಂದು ಗುರುತಿಸಲಾಗಿದೆ.  ಖಚಿತ ಮಾಹಿತಿಯನುಸಾರ ಕಾಸರಗೋಡು ಅಬಕಾರಿ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತ ಫೈಝಲ್ ಮಾದಕ ವಸ್ತು ಸಾಗಾಟ ಸೇರಿದಂತೆ ಎಂಟಕ್ಕೂ ಅಧಿಕ ಪ್ರಕರಣಗಳ ಆರೋಪಿಯಾಗಿದ್ದಾನೆ. ಹನೀಫ್ ವಿರುದ್ಧವೂ ಗಾಂಜಾ ಸಾಗಾಟ ಪ್ರಕರಣಗಳಿರುವುದಾಗಿ ಅಬಕಾರಿ ದಳದ ಸಿಬ್ಬಂದಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News