ಕಾಸರಗೋಡು: ಕಾರು ಮಗುಚಿ ಬಿದ್ದು ಇಬ್ಬರು ಮೃತ್ಯು

Update: 2024-02-18 06:41 GMT

ಕಾಸರಗೋಡು : ಕಾರು ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಕಾಞಂಗಾಡ್‌ ನ  ಪೆರಿಯದಲ್ಲಿ ರವಿವಾರ  ನಡೆದಿದೆ.

ಮೃತಪಟ್ಟವರನ್ನು ತಾಯನ್ನೂರಿನ ರಾಜೇಶ್ (35) ಮತ್ತು ರಘುನಾಥ್ (52) ಎಂದು ಗುರುತಿಸಲಾಗಿದೆ. ರಾಹುಲ್ ಮತ್ತು ರಾಜೇಶ್ ಎಂಬವರು ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಬೇಕಲ ಠಾಣಾ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News