ಕಾಸರಗೋಡು: ಹಾವು ಕಡಿದು ಮಹಿಳೆ ಮೃತ್ಯು

Update: 2024-07-04 09:28 GMT

ಕಾಸರಗೋಡು: ಹಾವು ಕಡಿದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಪೈವಳಿಕೆ ಸಮೀಪದ ಕುರುಡಪದವು ಎಂಬಲ್ಲಿ ಬುಧವಾರ ರಾತ್ರಿ 12 ಗಂಟೆ ಸುಮಾರಿಗೆ  ನಡೆದಿದೆ.

ಪೈವಳಿಕೆ ಕುರುಡಪದವಿನ ಚೋಮು ( 64) ಮೃತಪಟ್ಟ ಮಹಿಳೆ.

ಮಲಗಿದ್ದ ಚೋಮುರವರ ಕೈಗೆ ಯಾವುದೋ ಜೀವಿ ಕಡಿದ ಬಗ್ಗೆ ಅನುಭವವಾಗಿದ್ದು, ಎಚ್ಚರಗೊಂಡು ಸಹೋದರನಿಗೆ ತಿಳಿಸಿದ್ದಾರೆ. ಮನೆಯೊಳಗೆ ಶೋಧ ನಡೆಸಿದಾಗ ನಾಗರ ಹಾವು ಪತ್ತೆಯಾಗಿದೆ. ಕೂಡಲೇ ನೆರೆಮನೆಯರ ಸಹಾಯ ದಿಂದ ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲಾಗಲಿಲ್ಲ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News