ಕಾಸರಗೋಡು: ಆವರಣ ಇಲ್ಲದ ಬಾವಿಗೆ ಬಿದ್ದು ವ್ಯಕ್ತಿ ಮೃತ್ಯು

Update: 2023-07-28 09:06 GMT

ಕಾಸರಗೋಡು: ಆವರಣ ಇಲ್ಲದ ಬಾವಿಗೆ ಬಿದ್ದು ಪಾಕ ತಜ್ಞರೋರ್ವರು ಮೃತಪಟ್ಟ ಘಟನೆ ಪೆರ್ಲ ಸಮೀಪದ ಕಾಟುಕುಕ್ಕೆ ಕುಡ್ತಡ್ಕದಲ್ಲಿ ಗುರುವಾರ ನಡೆದಿದೆ.

ಮೃತರ ಪಟ್ಟವರೆಂದು ಜನಾರ್ಧನ ನಾಯಕ್ (42) ಗುರುತಿಸಲಾಗಿದೆ. ಮನೆ ಸಮೀಪದ ಬಾವಿಗೆ ಬಿದ್ದು ಈ ದುರ್ಘಟನೆ ನಡೆದಿದೆ. ನೀರು ಸೇದಲು ಹೋಗಿದ್ದ ಸಂದರ್ಭ ದಲ್ಲಿ ಕಾಲು ಜಾರಿ ಆಕಸ್ಮಿಕ ವಾಗಿ ಬಿದ್ದಿರ ಬಹುದೆಂದು ಶಂಕಿಸಲಾಗಿದೆ .

ತವರು ಮನೆಗೆ ತೆರಳಿದ್ದ ಪತ್ನಿ ಮತ್ತು ಮಗು ಮನೆಗೆ ಬಂದಾಗ ಜನಾರ್ಧನ ನಾಪತ್ತೆಯಾಗಿದ್ದು , ಪರಿಸರ ವಾಸಿಗಳಿಗೆ ಮಾಹಿತಿ ನೀಡಿದ್ದರು. ಗಮನಿಸಿದಾಗ ಬಾವಿಗೆ ಬಿದ್ದಿರುವುದು ಪತ್ತೆಯಾಗಿದೆ. ಪರಿಸರವಾಸಿಗಳು ಮತ್ತು ಮುಳುಗು ತಜ್ಞರ ಸಹಾಯ ದಿಂದ ಮೃತ ದೇಹವನ್ನು ಮೇಲಕ್ಕೆತ್ತಲಾಯಿತು.ಬದಿಯಡ್ಕ ಪೊಲೀಸರು ಮಹಜರು ನಡೆಸಿ ದರು ಮೃತದೇಹ ವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿತ್ತು.


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News