ಕಾಸರಗೋಡು: ಶಾಲಾ ಬಸ್ ಪಲ್ಟಿ; ಚಾಲಕ, ಕ್ಲೀನರ್‌ ಸಹಿತ ಇಬ್ಬರು ವಿದ್ಯಾರ್ಥಿಗಳಿಗೆ ಗಾಯ

Update: 2024-07-08 09:42 GMT

ಕಾಸರಗೋಡು: ಚಾಲಕನ ನಿಯಂತ್ರಣ ತಪ್ಪಿ‌ದ ಶಾಲಾ ಬಸ್ಸು ರಸ್ತೆ ಬದಿಯ ಹೊಂಡಕ್ಕೆ ಬಿದ್ದ ಘಟನೆ ಸೋಮವಾರ ಬೆಳಿಗ್ಗೆ ಸೀತಾಂಗೋಳಿ - ಪೆರ್ಲ ರಸ್ತೆಯ ಬಾಡೂರಿನಲ್ಲಿ ನಡೆದಿದೆ.

ಶಿರಿಯ ಕುನಿಲ್ ಶಾಲೆಯ ಬಸ್ಸು ಬೆಳಿಗ್ಗೆ ವಿದ್ಯಾರ್ಥಿಗಳನ್ನು ಕರೆದೊಯ್ಯಲು ತೆರಳುತ್ತಿದ್ದಾಗ ಈ ಅವಘಡ ನಡೆದಿದೆ. ಬಸ್ಸಿನಲ್ಲಿದ್ದ ಇಬ್ಬರು ವಿದ್ಯಾರ್ಥಿಗಳು, ಚಾಲಕ ಹಾಗೂ ಕ್ಲೀನರ್ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಬಸ್ಸಿನಲ್ಲಿ ಕೆಲವೇ ಕೆಲ ವಿದ್ಯಾರ್ಥಿ ಗಳಿದ್ದರು. ಇದರಿಂದ ಭಾರೀ ಅಪಾಯ ತಪ್ಪಿದೆ ಎನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News