ಕಾಸರಗೋಡು: ಸಿರಿಬಾಗಿಲು ಪ್ರತಿಷ್ಠಾನದಲ್ಲಿ ಯಕ್ಷಗಾನ ಶಿಕ್ಷಕರಿಗೆ ತರಬೇತಿ

Update: 2024-09-25 07:16 GMT

ಕಾಸರಗೋಡು: ತೆಂಕುತಿಟ್ಟು ಯಕ್ಷಗಾನದ ಶಾಸ್ತ್ರೀಯ ನಾಟ್ಯ ಗುರುಗಳಾದ ಕರ್ಗಲ್ಲು ವಿಶ್ವೇಶ್ವರ ಭಟ್ ಇವರಿಂದ ಯಕ್ಷಗಾನ ಶಿಕ್ಷಕರಿಗೆ ತರಬೇತಿಯನ್ನು ಸಿರಿ ಬಾಗಿಲು ಪ್ರತಿಷ್ಠಾನದಲ್ಲಿ ಆರಂಭಿಸಲಾಯಿತು.

ಕಾರ್ಯಕ್ರಮಕ್ಕೆ ಅಮೆರಿಕದಿಂದ ಆಗಮಿಸಿದ ಕಲಾಪೋಷಕರಾದ  ದಿನೇಶ ಶ್ರೀನಿವಾಸರಾವ್ ಮತ್ತು ಪಣಂಬೂರು ವೆಂಕಟರಾಯ ಐತಾಳರ ಪುತ್ರಿ ಮನೋರಮಾ ದಿನೇಶ ಶ್ರೀನಿವಾಸರಾವ್ ಇವರು ಹಾಗೂ ಕರ್ನಾಟಕ ಬ್ಯಾಂಕ್ ನ ಡಿ.ಜಿ.ಎಂ ವಸಂತ ಹೇರ್ಳೆ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ಕಾರ್ಯಕ್ರಮವನ್ನು ಮನೋರಮಾ ದಿನೇಶ ಶ್ರೀನಿವಾಸರಾವ್ ಅವರು ಉದ್ಘಾಟಿಸಿದರು. ವಸಂತ ಹೇರ್ಳೆಯವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.

 ದಿನೇಶ ಶ್ರೀನಿವಾಸರಾವ್ ಮತ್ತು ಮನೋರಮಾ ರಾವ್ ಅವರನ್ನು ಸಿರಿಬಾಗಿಲು ಪ್ರತಿಷ್ಠಾನದ ಮಹಾಪೋಷಕವಾಗಿ ಗೌರವಿಸಲಾಯಿತು.  ವಸಂತ ಹೇರ್ಳೆ ಯವರನ್ನು ವಿಶೇಷವಾಗಿ ಅಭಿನಂದಿಸಲಾಯಿತು. ಶಿಕ್ಷಕರಿಗೆ ತರಬೇತಿಯ ಪ್ರಾಯೋಜಕತ್ವ ವಹಿಸಿರುವ ಪಣಂಬೂರು ವಾಸುದೇವ ಐತಾಳ ಅವರಿಗೆ ಪ್ರತಿಷ್ಠಾನ ವತಿಯಿಂದ ಧನ್ಯವಾದ ಸೂಚಿಸಲಾಯಿತು.

ಲಕ್ಷ್ಮಿನಾರಾಯಣ ತಂತ್ರಿ ಕಾವು ಮಠ,   ಜಗದೀಶ್ ಕೂಡ್ಲು, ಸುಮಿತ್ರಾ ಮಯ್ಯ ಮುಂತಾದವರು ಉಪಸ್ಥಿತರಿದ್ದರು.

ಡಾ. ಶ್ರುತ ಕೀರ್ತಿ ರಾಜ್ ನಿರೂಪಿಸಿದರು. ರಾಮಕೃಷ್ಣಯ್ಯ ಸ್ವಾಗತಿಸಿದರು.  ಬಳಿಕ 20 ಕ್ಕೂ ಹೆಚ್ಚು ಶಿಕ್ಷಕರಿಗೆ ಪ್ರಥಮ ಹಂತದಲ್ಲಿ ಕರ್ಗಲ್ಲು ಗುರುಗಳಿಂದ  ತರಬೇತಿ ನಡೆಯಿತು.


Delete Edit


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News