ಕಾಸರಗೋಡು: ರೈಲಿನಿಂದ ಬಿದ್ದು ಯುವತಿ ಮೃತ್ಯು

Update: 2024-01-06 09:53 GMT

ಕಾಸರಗೋಡು: ಯುವತಿಯೋರ್ವಳು ರೈಲಿ ನಿಂದ ಬಿದ್ದು ಮೃತಪಟ್ಟ ಘಟನೆ ಪಳ್ಳಿಕೆರೆಯಲ್ಲಿ ಶನಿವಾರ ನಡೆದಿದೆ.

ಮೃತ  ಯುವತಿಯನ್ನು ಕಲ್ಪಟ್ಟ ಕಾವುಮಂದ ನಿವಾಸಿ ಐಶ್ವರ್ಯ ಜೋಸೆಫ್ (30) ಎಂದು ಗುರುತಿಸಲಾಗಿದೆ. ಮೃತ ದೇಹ ವನ್ನು ಕಾಸರಗೋಡು ಜನ ರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಮೃತ ದೇಹದ ಬಳಿ ಲಭಿಸಿದ ಪರ್ಸ್ ನಲ್ಲಿದ್ದ ಗುರುತು ಚೀಟಿ ಯಿಂದ ಯುವತಿಯ ಗುರುತು ಪತ್ತೆ ಹಚ್ಚಲಾಗಿದೆ.

ಕೋಝಿಕ್ಕೋಡ್ ನ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗ ನಿರ್ವಹಿಸುತ್ತಿರುವ ಯುವತಿ ನೇತ್ರಾವತಿ ರೈಲಿನಲ್ಲಿ ಮಂಗಳೂರಿಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಪಳ್ಳಿಕೆರೆ ಮಾಸ್ತಿ ಗುಡ್ಡೆಯ ರೈಲ್ವೆ ಹಳಿ ಸಮೀಪ ಮೃತ ದೇಹ ಪತ್ತೆಯಾಗಿದ್ದು, ಬೆಳಿಗ್ಗೆ ಸ್ಥಳೀಯರು  ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News