ಅಡ್ಕಸ್ಥಳ: ರಸ್ತೆ ಬದಿ ನಿಲ್ಲಿಸಿದ್ದ ಪಿಕಪ್ ಗೆ ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ; ಪಿಕಪ್ ಚಾಲಕ ಮೃತ್ಯು

Update: 2023-09-26 07:20 GMT

ಕಾಸರಗೋಡು: ರಸ್ತೆ ಬದಿ ನಿಲ್ಲಿಸಿದ್ದ ಪಿಕಪ್ ಗೆ ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ ಹೊಡೆದ ಪರಿಣಾಮ ಪಿಕಪ್‌ ಚಾಲಕ ಮೃತ ಪಟ್ಟ ಘಟನೆ ಕೇರಳ ಕರ್ನಾಟಕ ಗಡಿ ಪ್ರದೇಶವಾದ ಅಡ್ಕಸ್ಥಳದ ಸಮೀಪ ಮಂಗಳವಾರ ನಡೆದಿದೆ.

ಮೃತ ಚಾಲಕನನ್ನು ಪೆರ್ಲ ಮಣಿಯಂಪಾರೆ ಪಜ್ಜನದ ಮುಸ್ತಫಾ ( 43) ಎಂದು ಗುರುತಿಸಲಾಗಿದೆ. ಬಸ್ ನ ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲೆತ್ನಿಸಿದಾಗ ರಸ್ತೆ ಬದಿ ನಿಲ್ಲಿಸಿದ್ದ ಅಡಿಕೆ ಗಿಡ ಸಾಗಾಟದ ಪಿಕಪ್ ಗೆ ಬಸ್ಸು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಘಟನೆಯಲ್ಲಿ ತಲೆಗೆ ಗಂಭೀರ ಗಾಯಗೊಂಡ ಮುಸ್ತಫಾ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ದರೂ ಜೀವ ಉಳಿಸಲಾಗಲಿಲ್ಲ ಎಂದು ತಿಳಿದು ಬಂದಿದೆ.

ಪಿಕಪ್ ವ್ಯಾನ್ ನಲ್ಲಿದ್ದ ಇನ್ನೋರ್ವ ಗಾಯಗೊಂಡಿದ್ದು,  ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News