ಮಂಜೇಶ್ವರ: ಏಳು ವರ್ಷಗಳ ಬಳಿಕ ಕುಟುಂಬಸ್ಥರನ್ನು ಸೇರಿದ ಯುವಕ

Update: 2023-12-26 11:08 GMT

ಮಂಜೇಶ್ವರ: ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಬಳ್ಳಾರಿ ಮೂಲದ ಇಮ್ತಿಯಾಝ್‌ (27) ಎಂಬ ಯುವಕನನ್ನು ಸ್ನೇಹಾಲಯ ತಂಡವು ಕುಟುಂಬದವರಿಗೆ ಮರಳಿ ಒಪ್ಪಿಸಿದೆ. ಈ ಮೂಲಕ ಕ್ರಿಸ್ಮಸ್‌ ಹಬ್ಬದ ಅತ್ಯಮೂಲ್ಯ ಉಡುಗೊರೆಯನ್ನು ಕುಟುಂಬವೊಂದಕ್ಕೆ  ಸಮರ್ಪಿಸಿದೆ.

2021ರ ಸೆಪ್ಟೆಂಬರ್ 15ರಂದು  ಇಮ್ತಿಯಾಝ್‌ ನನ್ನು ಮಂಜೇಶ್ವರದ ಬೀದಿಯಿಂದ ರಕ್ಷಿಸಿದ ಸ್ನೇಹಾಲಯ ತಂಡವು , ಆತನ ಆರೈಕೆ ಮತ್ತು ಚಿಕಿತ್ಸೆಗಾಗಿ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿತು.  

ಇಮ್ತಿಯಾಝ್‌ ಗೆ ಅಸಾಧಾರಣವಾದ ಆರೈಕೆ ಮತ್ತು ಚಿಕಿತ್ಸೆಯನ್ನು ಒದಗಿಸಿದ ಸ್ನೇಹಾಲಯದ ತಂಡವು ಮುಂಬೈಯ ಶ್ರದ್ಧಾ ಫೌಂಡೇಶನ್ ನ  ಬೆಂಬಲದೊಂದಿಗೆ, ಅತನ ಕುಟುಂಬವನ್ನು ಸಂಪರ್ಕಿಸಿತು.

2023ರ ಡಿಸೆಂಬರ್ 23ರಂದು, ಇಮ್ತಿಯಾಝ್‌ ನ ಕುಟುಂಬವು ತಮ್ಮ ಮಗನನ್ನು ಮರಳಿ ಪಡೆಯಲು ಮಂಜೇಶ್ವರದ ಸ್ನೇಹಾಲಯಕ್ಕೆ  ಆಗಮಿಸಿತು. ಏಳು ವರ್ಷಗಳ ಸುದೀರ್ಘ ಬೇರ್ಪಡುವಿಕೆಯ ನಂತರ ಆತನನ್ನು ನೋಡಿದ ಆತನ ಕುಟುಂಬಸ್ಥರ ಸಂತೋಷಕ್ಕೆ ಪಾರವೇ ಇರಲಿಲ್ಲ. ಇದೀಗ ಈ  ಪುನರ್ಮಿಲನವು ಸ್ನೇಹಾಲಯ ಮತ್ತು ಶ್ರದ್ಧಾ ಫೌಂಡೇಶನ್ ನ ಒಂದು ಸ್ಮರಣೀಯ ಉಡುಗೊರೆಯಾಗಿದೆ.

ಸ್ನೇಹಾಲಯದ ಸಂಸ್ಥಾಪಕರಾದ  ಜೋಸೆಫ್ ಕ್ರಾಸ್ತಾ ಅವರು ಇಮ್ತಿಯಾಝ್‌ ಗೆ  ನೀಡಿದ ಪೋಷಣೆ, ಆರೈಕೆ ಹಾಗೂ ಮಾತೃವಾತ್ಸಲ್ಯಕ್ಕಾಗಿ ಕುಟುಂಬಸ್ಥರು ಕೃತಜ್ಞತೆಯನ್ನು ಸಲ್ಲಿಸಿದರು.

 

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News