ಕಾಸರಗೋಡು | ರೈಲುಗಳ ಮೇಲೆ ಕಲ್ಲು ತೂರಾಟ ಹತ್ತಿಕ್ಕಲು ಮುಂದಾದ ಪೊಲೀಸರು: 50 ಮಂದಿ ವಶಕ್ಕೆ

Update: 2023-08-22 08:10 GMT

ಕಾಸರಗೋಡು, ಆ.22: ರೈಲುಗಳ ಮೇಲೆ ನಿರಂತರ ಕಲ್ಲು ತೂರಾಟದ ಘಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ  ಕಾಸರಗೋಡು  ಪೊಲೀಸರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.

ಇಂದು ಬೆಳಗ್ಗೆಯಿಂದ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದು, ರೈಲು ಹಳಿ ಪರಿಸರದಲ್ಲಿ ಸಂಶಯಾಸ್ಪದವಾಗಿ ಕಂಡು ಬಂದ 50 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದವರನ್ನು ವಿಚಾರಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.
ತಪ್ಪಿತಸ್ಥರ ವಿರುದ್ಧ 10 ವರ್ಷಗಳ ಕಠಿಣ  ಶಿಕ್ಷೆ ನೀಡುವ  ಮೊಕದ್ದಮೆ ಹೂಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ರೈಲ್ವೆ  ಹಳಿ  ಕೇಂದ್ರೀಕರಿಸಿ ಪೊಲೀಸ್ ನಿಗಾ ಹಾಗೂ  ಸಿ ಸಿ ಟಿ ವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.  ರೈಲ್ವೆ  ಹಳಿ  ಪರಿಸರದ ಮನೆಗಳನ್ನು ಕೇಂದ್ರೀಕರಿಸಿ ಪೊಲೀಸರು ನಿಗಾ ವಹಿಸಿದ್ದಾರೆ. ರೈಲುಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.
 ಕಾಸರಗೋಡು - ಕಣ್ಣೂರು ನಡುವೆ ಕಳೆದ ಒಂದು ತಿಂಗಳ ಅವಧಿಯಲ್ಲಿ ಹತ್ತಕ್ಕೂ ಅಧಿಕ  ಕಲ್ಲೆಸೆತದ ಘಟನೆಗಳು ನಡೆದಿವೆ. ಇದಲ್ಲದೆ ಹಳಿಯಲ್ಲಿ ಕಲ್ಲು ಸೇರಿದಂತೆ  ಹಲವು ವಸ್ತುಗಳು ಪತ್ತೆಯಾಗಿದ್ದವು. ಈ ಹಿನ್ನಲೆಯಲ್ಲಿ ಪೊಲೀಸರು ಕಟ್ಟು ನಿಟ್ಟಿನ ಕ್ರಮಕ್ಕೆ  ಮುಂದಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News